ಸಿಗ್ನೇಚರ್‌ ಬ್ರಿಡ್ಜ್‌ನಲ್ಲಿ ಮತ್ತೊಂದು ಅವಘಡ;ಬೈಕ್‌ ಸವಾರ ಬಲಿ 

Team Udayavani, Nov 24, 2018, 12:42 PM IST

ಹೊಸದಿಲ್ಲಿ: ನೂತನವಾಗಿ ಉದ್ಘಾಟನೆಯಾದ ದೆಹಲಿಯ ಸಿಗ್ನೇಚರ್‌ ಬ್ರಿಡ್ಜ್‌ನಲ್ಲಿ ಶನಿವಾರ ಬೆಳಗ್ಗೆ ಇನ್ನೊಂದು ಅವಘಡ ಸಂಭವಿಸಿದ್ದು, ಸ್ಕಿಡ್‌ ಆಗಿ ಬೈಕ್‌ ಸವಾರ ಮೃತ ಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. 

ಶುಕ್ರವಾರ ಇದೇ ಸೇತುವೆಯಲ್ಲಿ ಇಬ್ಬರು ಬೈಕ್‌ ಸವಾರರು ದಾರುಣವಾಗಿ ಸಾವನ್ನಪ್ಪಿದ್ದರು. ನಿಯಂತ್ರಣ ತಪ್ಪಿ ಬಿದ್ದ ಬೈಕ್‌ ಸವಾರರು ಡಿವೈಡರ್‌ಗೆ ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಇಂದಿನ ಅವಘಡಕ್ಕೆ ಕಾರಣವೇನು ಎಂದು ಇದುವರೆಗೆ ತಿಳಿದು ಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈಶಾನ್ಯ ದೆಹಲಿ ಮತ್ತು ಉತ್ತರ ದೆಹಲಿಯ ನಡುವೆ ಸಂಚಾರದ ಸಮಯ ಕಡಿಮೆ ಮಾಡುವ ಸಲುವಾಗಿ ಯಮುನಾ ನದಿಗೆ ಅಡ್ಡಲಾಗಿ ಸಿಗ್ನೇಚರ್‌ ಬ್ರಿಡ್ಜ್‌ ನಿರ್ಮಾಣ ಮಾಡಲಾಗಿದೆ. 

ಸರಣಿಯಂತೆ ನಡೆದ ಅವಘಡಗಳು ಬ್ರಿಡ್ಜ್‌ ಮೂಲಕ ಪ್ರಯಾಣಿಸುವ ವಾಹನ ಸವಾರರಲ್ಲಿ ಭಯ ಹುಟ್ಟಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ