ಕಾಂಗ್ರೆಸ್‌ ಪಕ್ಷದ ಕೊಲ್ಲಂ ಮಾಜಿ ಸಂಸದ ಎಸ್‌ ಕೃಷ್ಣ ಕುಮಾರ್‌ ಬಿಜೆಪಿಗೆ ಸೇರ್ಪಡೆ

Team Udayavani, Apr 20, 2019, 5:51 PM IST

ಹೊಸದಿಲ್ಲಿ : ಕಾಂಗ್ರೆಸ್‌ ಪಕ್ಷಕ್ಕೆ ಒದಗಿರುವ ಇನ್ನೊಂದು ಹಿನ್ನಡೆ ಎಂಬ ರೀತಿಯಲ್ಲಿ ಆ ಪಕ್ಷದ ಕೊಲ್ಲಂ ಕ್ಷೇತ್ರದ ಮಾಜಿ ಸಂಸದ ಎಸ್‌ ಕೃಷ್ಣ ಕುಮಾರ್‌ ಅವರಿಂದು ಭಾರತೀಯ ಜನತಾ ಪಕ್ಷ ಸೇರಿದರು.

ರಾಷ್ಟ್ರ ರಾಜಧಾನಿಯಲ್ಲಿ,  ಬಿಜೆಪಿ ನಾಯಕರ ಸಮ್ಮುಖದಲ್ಲಿ, ಕುಮಾರ್‌ ಅವರನ್ನು ಕೇಸರಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.

ಕುಮಾರ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ಅವರು, ಕುಮಾರ್‌ ಅವರ ಸೇರ್ಪಡೆಯಿಂದ ಕೇಸರಿ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ