
ದೇಶದ ವಿರೋಧಿ ಚಟುವಟಿಕೆ ಆರೋಪ: ಆಂಧ್ರಪ್ರದೇಶದ ಹಲವೆಡೆ ಎನ್ ಐಎ ದಾಳಿ
Team Udayavani, Sep 18, 2022, 1:47 PM IST

ನೆಲ್ಲೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕೆಲವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಆಂಧ್ರ ಪ್ರದೇಶದ ಕರ್ನೂಲ್, ನೆಲ್ಲೂರ್, ನಂದ್ಯಾಲ್ ಮತ್ತು ತೆಲಂಗಾಣದ ನಿಜಾಮಾಬಾದ್ ನಲ್ಲಿ ಎನ್ಐಎ ದಾಳಿ ಮಾಡಿದೆ.
ಕಳೆದ ತಿಂಗಳು, ಎನ್ ಐಎ ಹೈದರಾಬಾದ್‌ನಲ್ಲಿ 27 ಜನರ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಲು ಸಂಚು ರೂಪಿಸಿದ್ದಾರೆಂದು ಕೇಸು ದಾಖಲಿಸಿತ್ತು.
ಇದನ್ನೂ ಓದಿ:ಸಿಎಂ ಬೊಮ್ಮಾಯಿ ಭೇಟಿಯಾದ ಪಿಣರಾಯಿ ವಿಜಯನ್: ಗಡಿ ರಸ್ತೆಗಳ ಕುರಿತು ಚರ್ಚೆ
ನಿಜಾಮಾಬಾದ್ ನಲ್ಲಿರುವ ಅಬ್ದುಲ್ ಖಾದರ್ ಅವರ ಮನೆಯನ್ನು ಪಿಎಫ್‌ಐ ಸದಸ್ಯರು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ ಎಂದು ಇತರ 26 ಜನರ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಅಬ್ದುಲ್ ಖಾದರ್ ಅವರು ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಹೆಚ್ಚುವರಿ ಭಾಗವನ್ನು ಪಿಎಫ್‌ಐ ಸದಸ್ಯರು ತಮ್ಮ ಸಭೆಗಳು ಮತ್ತು ತರಬೇತಿಗಳಿಗೆ ಬಳಸಲು ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ.
ಪಿಎಫ್‌ಐ ಸದಸ್ಯರು ಕರಾಟೆ ತರಗತಿಗಳ ಹೆಸರಿನಲ್ಲಿ ಯುವಕರಿಗೆ ತರಬೇತಿ ಮತ್ತು ದೈಹಿಕ ವ್ಯಾಯಾಮಗಳನ್ನು ಪ್ರಾರಂಭಿಸಿದ್ದರು. ಅವರ ದ್ವೇಷಪೂರಿತ ಭಾಷಣಗಳ ಮೂಲಕ ನಿರ್ದಿಷ್ಟ ಸಮುದಾಯದ ವಿರುದ್ಧ ಯುವಕರನ್ನು ಪ್ರಚೋದಿಸುತ್ತಿದ್ದರು ಎಂದು ಎಫ್‌ಐಆರ್ ನಲ್ಲಿ ಸೇರಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರದ ಪ್ರಗತಿಗಾಗಿ ಜಾತಿ ಮತ್ತು ಪ್ರಾದೇಶಿಕ ತಾರತಮ್ಯವನ್ನು ತೊಡೆದುಹಾಕಿ: ಯೋಗಿ ಆದಿತ್ಯನಾಥ್

ಒಡಿಶಾ ಸಚಿವನ ಹತ್ಯೆ: ಸಿಬಿಐ ತನಿಖೆಗೆ ಆಗ್ರಹ

ಬಿಜೆಪಿ ಜೊತೆಗೆ ಮೈತ್ರಿಗಿಂತ ಸಾಯುವುದು ಲೇಸು: ನಿತೀಶ್ ಕುಮಾರ್

ಮೋದಿ ಸರ್ಕಾರದ ಡಿಡಿಎಲ್ಜೆಯಲ್ಲಿ ಸಚಿವ ಜೈಶಂಕರ್ ನಟನೆ: ಜೈರಾಮ್ ರಮೇಶ್

ಗೋರಖ್ನಾಥ್ ದೇಗುಲ ದಾಳಿ: ಆರೋಪಿ ಅಹ್ಮದ್ ಮುರ್ತಾಜಾಗೆ ಮರಣದಂಡನೆ ಶಿಕ್ಷೆ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
