ಆ್ಯಪಲ್‌ನಿಂದ ಭಾರತಕ್ಕೆ ಪ್ರತ್ಯೇಕ ಐಫೋನ್ 6!
Team Udayavani, Mar 7, 2017, 3:45 AM IST
ನವದೆಹಲಿ: ಬೆಂಗಳೂರಿನಲ್ಲಿ ತಯಾರಿಕಾ ಘಟಕ ಆರಂಭಿಸಲು ಆ್ಯಪಲ್ ಕಂಪನಿ ಉದ್ದೇಶಿಸಿದ ಬೆನ್ನಲ್ಲೇ ಭಾರತಕ್ಕೆಂದೇ ಪ್ರತ್ಯೇಕ ಐಫೋನ್ ಒಂದನ್ನು ಪುನರ್ ಬಿಡುಗಡೆಗೊಳಿಸಿದೆ.
ಹಳೆಯ ಐಫೋನ್ 6 ಮಾದರಿಯಲ್ಲೇ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು ಭಾರತ ಸೇರಿದಂತೆ ಕೆಲವೊಂದು ಏಷ್ಯಾ ದೇಶಗಳಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಹೊಸ ಐಫೋನ್ 6, 32 ಜಿಬಿ ಮೆಮೊರಿ ಹೊಂದಿದೆ. ಬೂದು ಬಣ್ಣದಲ್ಲಿ ಇದು ಲಭ್ಯವಿದ್ದು 28,999 ರೂ.ಗೆ ಅಮೆಜಾನ್ ಅಂತರ್ಜಾಲ ಮಾರಾಟ ತಾಣದಲ್ಲಿ ಲಭ್ಯವಿದೆ.
ಇದರೊಂದಿಗೆ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದ್ದು, 8,550 ರೂ. ದರ ಕಡಿತ ಘೋಷಿಸಲಾಗಿದೆ. ಹೊಸ ಐಫೋನ್ 6ನಲ್ಲಿ ಆ್ಯಪಲ್ 1.8 ಗಿಗಾಹರ್ಟ್ಸ್ ಸಾಮರ್ಥ್ಯದ ಎ8 ಚಿಪ್‌ಸೆಟ್, 1 ಜಿಬಿ ರ್ಯಾಮ್, 4.7 ರೆಟಿನಾ ಪರದೆ, 8 ಮೆಗಾಪಿಕ್ಸೆಲ್‌ನ ಹಿಂಬದಿ ಕ್ಯಾಮೆರಾ ಮತ್ತು 1.2 ಮೆಗಾಪಿಕ್ಸೆಲ್‌ನ ಮುಂಭಾಗದ ಕ್ಯಾಮೆರಾ, 1818 ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ ಇದೆ. ಹಳೆಯ ಐಫೋನ್ 6 16ಜಿಬಿ, 64 ಜಿಬಿ, 128 ಜಿಬಿ ಮಾದರಿಗಳಲ್ಲಿ ಲಭ್ಯವಿದ್ದು, ಕಳೆದ ವರ್ಷ ಮಾರಾಟ ಸ್ಥಗಿತಗೊಳಿಸಲಾಗಿತ್ತು