ಕನಿಷ್ಠ ವೇತನ ಮಸೂದೆಗೆ ಒಪ್ಪಿಗೆ
Team Udayavani, Jul 27, 2017, 8:35 AM IST
ಹೊಸದಿಲ್ಲಿ: ಕಾರ್ಮಿಕ ಕಾಯ್ದೆಯನ್ವಯ ಕನಿಷ್ಠ ವೇತನ ನೀಡುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಪರಿಣಾಮ ಹೆಚ್ಚುಕಡಿಮೆ ನಾಲ್ಕು ಕೋಟಿ ಕಾರ್ಮಿಕರು ಲಾಭ ಪಡೆದುಕೊಳ್ಳಲಿದ್ದಾರೆ. ಕನಿಷ್ಠ ವೇತನ ಅಧಿನಿಯಮದ ಪ್ರಕಾರ ಮಸೂದೆಯಲ್ಲಿ ಪ್ರತಿ ತಿಂಗಳು ಕನಿಷ್ಠ 18,000 ರೂ. ನೀಡಬೇಕೆನ್ನುವ ಪ್ರಸ್ತಾವನೆಯನ್ನು ಅಂಗೀಕರಿಸಿ ಒಪ್ಪಿಗೆ ನೀಡಿದೆ. ಹಾಲಿ ಮುಂಗಾರು ಅಧಿವೇಶನದಲ್ಲೇ ಅದನ್ನು ಮಂಡಿಸಲಾಗುವ ಸಾಧ್ಯತೆಗಳಿವೆ.
ಕನಿಷ್ಠ ವೇತನ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್ ಪಾವತಿ ಕಾಯ್ದೆ 1965, ಸಮಾನ ಸಂಭಾವನೆ ಕಾಯ್ದೆ 1976ನ್ನು ಅದರಲ್ಲಿ ಸಮ್ಮಿಳನಗೊಳಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ರಾಜ್ಯಸಭೆಗೆ ಲಿಖೀತ ರೂಪದಲ್ಲಿ ನೀಡಿದ ಉತ್ತರದಲ್ಲಿ ಕಾರ್ಮಿಕರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಮಿಕ ನಿಯಮಾವಳಿಗಳನ್ನು ನಾಲ್ಕು ಅಥವಾ ಐದು ಗುಂಪುಗಳನ್ನಾಗಿ ವರ್ಗೀಕರಿಸಲಾಗುವುದು ಎಂದು ಹೇಳಿದ್ದರು.
ಇದೇ ವೇಳೆ ಚಿನ್ನದ ಮೇಲಿನ ವಾರ್ಷಿಕ ಹೂಡಿಕೆಯ ಮಿತಿಯನ್ನೂ (ಎಸ್‌ಜಿಬಿಎಸ್) ಹೆಚ್ಚಿಸುವ ಮಸೂದೆಯನ್ನೂ ಅಂಗೀಕರಿಸಿದೆ. ತಲಾ 500 ಗ್ರಾಂ ಮಿತಿಯನ್ನು 4 ಕಿಲೋ ಗ್ರಾಂಗೆ ಏರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ