ಪಿಎಂ ಕೇರ್ಸ್ಗೆ ಸೇನೆ 203 ಕೋಟಿ ರೂ.
Team Udayavani, Dec 18, 2020, 10:43 PM IST
ಹೊಸದಿಲ್ಲಿ: ಪಿಎಂ ಕೇರ್ಸ್ ನಿಧಿಗೆ ಭಾರತೀಯ ಸೇನೆ ತನ್ನ ಒಂದು ದಿನದ ವೇತನವಾದ 203.67 ಕೋಟಿ ರೂ.ಗಳನ್ನು ಅರ್ಪಿಸಿದೆ. ಆಂಗ್ಲಪತ್ರಿಕೆ ಇಂಡಿಯನ್ ಎಕ್ಸ್ ಪ್ರಸ್ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಈ ಅರ್ಜಿಗೆ ನೌಕಾಸೇನೆ ಮತ್ತು ವಾಯುಸೇನೆ ಉತ್ತರಿಸಿದ್ದರೂ ಭೂಸೇನೆ ಉತ್ತರಿಸಿಲ್ಲ. ಆದರೆ ಭೂಸೇನೆ ಮೇ 15ರಂದು ಮಾಡಿದ ಟ್ವೀಟ್ನಲ್ಲಿ, ನಮ್ಮ ಯೋಧರು 157.71 ಕೋಟಿ ರೂ.ಗಳನ್ನು ಸ್ವಯಂಪ್ರೇರಣೆಯಿಂದ ನೀಡಿದ್ದಾರೆಂದು ತಿಳಿಸಿದೆ.
ವಾಯುಸೇನೆ 29.18 ಕೋಟಿ ರೂ., ನೌಕಾಸೇನೆ 16.77 ಕೋಟಿ ರೂ. ನೀಡಿದೆ. ಒಟ್ಟಾರೆ ರಕ್ಷಣಾ ಸಚಿವಾಲಯ ನೀಡಿರುವ ಮೊತ್ತ 500 ಕೋಟಿ ರೂ. ಇದರಲ್ಲಿ 3 ಸೇನಾಪಡೆಗಳು, ರಕ್ಷಣಾ ಉದ್ಯಮಗಳು ನೀಡಿರುವ ಹಣ ಸೇರಿದೆ. ಸ್ವಪ್ರೇರಣೆಯಿಂದ ಕೊಟ್ಟವರಿಂದ ಮಾತ್ರ ಹಣ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ