ಸಾಮಾಜಿಕ ಜಾಲತಾಣಗಳ 150 ಖಾತೆಗಳ ಬಗ್ಗೆ ಎಚ್ಚರ

Team Udayavani, Nov 8, 2019, 1:05 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ 150ಕ್ಕೂ ಹೆಚ್ಚು ನಕಲಿ ಖಾತೆಗಳು ಇದ್ದು, ಅವುಗಳ ಮೂಲಕ ಹಿರಿಯ ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಜಾಲದೊಳಕ್ಕೆ ಬೀಳಿಸುವ ಸಾಧ್ಯತೆ ಇದೆ ಎಂದು ಸೇನೆ ಎಚ್ಚರಿಕೆ ನೀಡಿದೆ.

ಹನಿಟ್ರ್ಯಾಪ್‌ ಜಾಲಕ್ಕೆ ಹಿರಿಯ ಅಧಿಕಾರಿಗಳನ್ನು ಬೀಳಿಸಿ ಸೂಕ್ಷ್ಮ ಮಾಹಿತಿ ಪಡೆದುಕೊಳ್ಳುವ ಜಾಲ ಸಕ್ರಿಯವಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಸುತ್ತೋಲೆಯಲ್ಲಿ ಸೇನೆ ಎಚ್ಚರಿಕೆ ನೀಡಿದೆ. ಮಹಿಳೆಯರ ಹೆಸರಲ್ಲಿ ಖಾತೆಗಳನ್ನು ತೆರೆದು ಸೇನೆಯ ಅಥವಾ ಪೊಲೀಸ್‌ ಇಲಾಖೆಯ ಸಹೋದ್ಯೋಗಿ ಎಂಬಂತೆ ಬಿಂಬಿಸಿ ಅವುಗಳ ಮೂಲಕ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಗುತ್ತದೆ. ಕೆಲವು ಖಾತೆಗಳು 2-3 ವರ್ಷಗಳಷ್ಟು ಹಳೆಯದು.

ಹೀಗಾಗಿ ಅವುಗಳು ಸಂಶಯಕ್ಕೆ ಆಸ್ಪದ ಬಾರದಂತೆ ಕಾರ್ಯವೆಸಗುತ್ತವೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಪಾಕಿಸ್ಥಾನದ ಐಎಸ್‌ಐ ಪ್ರೇರಿತ ಇಂಥ ಒಂದು ಜಾಲತಾಣದ ಖಾತೆಯ ವಂಚನೆಗೆ ಬಲಿಯಾಗಿ ಸೇನೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ಯೋಧರನ್ನು ಬುಧವಾರ ರಾಜಸ್ಥಾನ ಪೊಲೀಸ್‌ ಇಲಾಖೆ ಬಂಧಿಸಿರುವ ಹಿನ್ನೆಲೆಯಲ್ಲಿ ಈ ಸುತ್ತೋಲೆ ಗಮನಾರ್ಹ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ