ಸೇನಾ ವೈದ್ಯ, ಜ್ಯೂನಿಯರ್ ಕಮಿಷನ್ ಅಧಿಕಾರಿಗೆ ಮಾರಣಾಂತಿಕ ಕೋವಿಡ್ 19 ಸೋಂಕು ದೃಢ
ಆರ್ಮಿ ಅಧಿಕಾರಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
Team Udayavani, Mar 30, 2020, 12:42 PM IST
Representative Image
ನವದೆಹಲಿ:ಮಾರಣಾಂತಿಕ ಕೋವಿಡ್ 19 ಜಗತ್ತಿನಾದ್ಯಂತ ಮರಣಮೃದಂಗ ಮುಂದುವರಿಸಿರುವ ನಡುವೆಯೇ ಸೇನೆಯ ಕರ್ನಲ್ ಶ್ರೇಣಿಯ ವೈದ್ಯರಿಗೆ ಕೋವಿಡ್ 19 ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವುದಾಗಿ ತಿಳಿಸಿದೆ. ಕೋಲ್ಕತಾದ ಆರ್ಮಿ ಕಮಾಂಡ್ ಆಸ್ಪತ್ರೆಯಲ್ಲಿ 52 ವರ್ಷದ ಸೇನಾ ಅಧಿಕಾರಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚೆಗಷ್ಟೇ ದೆಹಲಿಯಿಂದ ಕೋಲ್ಕತಾಗೆ ವಾಪಸ್ ಆಗಿದ್ದರು ಎಂದು ವರದಿ ತಿಳಿಸಿದೆ.
ಆರ್ಮಿ ಅಧಿಕಾರಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತೀಯ ಸೇನೆಯ ಜ್ಯೂನಿಯರ್ ಕಮಿಷನ್ ಅಧಿಕಾರಿ (ಜೆಸಿಒ)ಗೂ ಕೋವಿಡ್ 19 ಸೋಂಕು ಇದ್ದಿರುವುದು ಪತ್ತೆಯಾಗಿದೆ.
ಈ ಇಬ್ಬರ ಜತೆ ಎಷ್ಟು ಮಂದಿ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಗುರುತಿಸಿ ಈಗಾಗಲೇ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಅಲ್ಲದೇ ಇನ್ನಷ್ಟು ಜನರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಡೆಹ್ರಾಡೂನ್ ಮೂಲದ ಜೆಸಿಒ ಇತ್ತೀಚೆಗಷ್ಟೇ ದೆಹಲಿಯ ಆರ್ಮಿ ಕಚೇರಿಗೆ ಭೇಟಿ ನೀಡಿದ್ದರು ಎಂದು ವರದಿ ತಿಳಿಸಿದೆ.
ಕಳೆದ ವಾರ ರಜೆಯಲ್ಲಿ ಊರಿಗೆ ತೆರಳಿದ್ದ ಸೇನಾ ಯೋಧರೊಬ್ಬರಿಗೆ ಕೋವಿಡ್ 19 ವೈರಸ್ ಇದ್ದಿರುವುದು ಪತ್ತೆಯಾಗಿತ್ತು. ಇದೀಗ ಸೋಂಕಿತ ವೈದ್ಯರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು