ಶೋಪಿಯಾನ್: ಕುಕ್ಕರ್‌ನಲ್ಲಿ ಅಳವಡಿಸಲಾದ ಐಇಡಿ ಪತ್ತೆ ಹಚ್ಚಿದ ಸೇನೆ
Team Udayavani, Nov 26, 2022, 3:12 PM IST
ಶೋಪಿಯಾನ್ : ಪೊಲೀಸರು ಮತ್ತು ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆಯಲ್ಲಿ, ಶೋಪಿಯಾನ್‌ನ ಇಮಾಮ್ಸಾಹಿಬ್‌ನಲ್ಲಿ ಕುಕ್ಕರ್‌ನಲ್ಲಿ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆ ಹಚ್ಚಿ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಕುಕ್ಕರ್‌ನೊಳಗೆ ಹಾಕಲಾಗಿದ್ದ ಸ್ಫೋಟಕ ಸಾಧನವು ಸ್ಫೋಟವಾಗುವ ಮೊದಲು ಪತ್ತೆಯಾಗಿದ್ದು, ಪೊಲೀಸರು ಮತ್ತು 44 ರಾಷ್ಟ್ರೀಯ ರೈಫಲ್ಸ್‌ನ ಪ್ರಯತ್ನದಿಂದ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ ಎಂದು ಹೇಳಲಾಗಿದೆ.
ನವೆಂಬರ್ ಆರಂಭದಲ್ಲಿ, ಕಾಶ್ಮೀರದ ರಾಂಬನ್ ಜಿಲ್ಲೆಯ ನಶ್ರಿ ನಾಕಾ ಬಳಿ ಮಿನಿ ಬಸ್ ಅನ್ನು ತಡೆದು ಶೋಧಿಸಿದ ನಂತರ ಸುಧಾರಿತ ಸ್ಫೋಟಕ ಐಇಡಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
“ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನೆಯ ಬಾಂಬ್ ನಿಷ್ಕ್ರಿಯ ದಳದ ತಂಡಗಳು ಸ್ಥಳಕ್ಕೆ ತಲುಪಿ ಐಇಡಿಯನ್ನು ನಿಷ್ಕ್ರಿಯ ಗೊಳಿಸಿವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
56,332 ರೂ ಬೆಲೆಯ ಶಾಲು ಧರಿಸಿದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಟೀಕೆ
263 ಕೋಟಿ ರೂ ಅಕ್ರಮ; ಮಾಜಿ ತೆರಿಗೆ ಅಧಿಕಾರಿ, ನಟಿ ಕೃತಿ ವರ್ಮಾ ವಿಚಾರಣೆ
ಚಂದ್ರಯಾನ-3 ಇಳಿದಾಣಗಳ ಗುರುತು ಪೂರ್ಣ; ವರ್ಷಾಂತ್ಯಕ್ಕೆ ಉಡಾವಣೆ ಸಾಧ್ಯತೆ
ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!
ಮಗುವಿನ ಜತೆಗೆ ಬಾಡಿಗೆ ತಾಯಿ ಬಾಂಧವ್ಯ ಹೊಂದಿರಬೇಕಾಗಿಲ್ಲ: ಕೇಂದ್ರ