ರಾತ್ರಿ ಗಡಿ ನುಸುಳಲು ಯತ್ನಿಸಿದ್ದ PAK ನುಸುಳುಕೋರರನ್ನು ಹತ್ಯೆಗೈದ ಭಾರತೀಯ ಸೇನೆ; ವಿಡಿಯೋ

Team Udayavani, Sep 18, 2019, 11:03 AM IST

ನವದೆಹಲಿ: ಗಡಿ ನಿಯಂತ್ರಣ ರೇಖೆ ಸಮೀಪ ಇರುವ ಉರಿ, ಕೇರಾನ್, ಫೂಂಚ್, ಮೆಂಧಾರ್ ಮತ್ತು ನೌಶೇರಾ ಸೆಕ್ಟರ್ ಸೇರಿದಂತೆ ವಿವಿಧ ಪ್ರದೇಶಗಳ ಸಮೀಪ ಪಾಕಿಸ್ತಾನದ ಬಿಎಟಿ(ಬಾರ್ಡರ್ ಆ್ಯಕ್ಷನ್ ಟೀಮ್) ಸೈನಿಕರು ಹಾಗೂ ಉಗ್ರರನ್ನು ನಿಯೋಜಿಸಿದ್ದು, ಇತ್ತೀಚೆಗೆ ಭಾರತದ ಗಡಿಯೊಳಗೆ ನುಗ್ಗುವ ಪಾಕ್ ನ ಬಿಎಟಿಯ ಪ್ರಯತ್ನವನ್ನು ಭಾರತೀಯ ಸೇನಾಪಡೆ ವಿಫಲಗೊಳಿಸಿರುವುದು ಬೆಳಕಿಗೆ ಬಂದಿದೆ.

ಭಾರತೀಯ ಸೇನಾಪಡೆ ಬಿಡುಗಡೆಗೊಳಿಸಿರುವ ಸಿಸಿಟವಿ ವೀಡಿಯೋದಲ್ಲಿ, ಸೆಪ್ಟೆಂಬರ್ 12-13ರಂದು ರಾತ್ರಿ ಪಾಕಿಸ್ತಾನದ ಗಡಿಕಾವಲು ಪಡೆ(ಬಿಎಟಿ) ತಂಡ ಹಾಜಿಪುರ್ ನಲ್ಲಿ ಒಳನುಸುಳಲು ಯತ್ನಿಸಿರುವ ಥರ್ಮಲ್ ಇಮೇಜ್ ಸೆರೆಯಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಪಡೆ ಗ್ರೆನೇಡ್ ದಾಳಿ ನಡೆಸಿ ಪಾಕ್ ನ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವುದು ಸೆರೆಯಾಗಿದೆ.

ಗಡಿನಿಯಂತ್ರಣ ರೇಖೆ ಸಮೀಪದಲ್ಲಿ ಒಳನುಸುಳಲು ಪ್ರಯತ್ನಿಸಿದ್ದ ಪಾಕಿಸ್ತಾನದ ಎಸ್ ಎಸ್ ಜಿ, ಬಿಎಟಿ ಸೈನಿಕರನ್ನು ಭಾರತೀಯ ಪಡೆ ಗ್ರೆನೇಡ್ ದಾಳಿ ಮೂಲಕ ನುಸುಳುಕೋರರನ್ನು ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ.


ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ಪಾಕಿಸ್ತಾನದ ಮಿಲಿಟರಿ ಮತ್ತು ಉಗ್ರರು ಗಡಿನಿಯಂತ್ರಣ ರೇಖೆಯಲ್ಲಿ ಸಕ್ರಿಯವಾಗಿದ್ದು, ಒಳನುಸುಳಿ ದಾಳಿ ನಡೆಸಲು ಸಂಚು ರೂಪಿಸಿದ್ದವು. ಆದರೆ ಪಾಕಿಸ್ತಾನದ ಎಲ್ಲಾ ದಾಳಿ ಯತ್ನ, ಒಳನುಸುಳುವಿಕೆಯನ್ನು ಭಾರತೀಯ ಸೇನಾಪಡೆ ವಿಫಲಗೊಳಿಸಿದ್ದವು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ