ತನ್ನ ಮದುವೆಗೆ ತಾನೇ ಗೈರಾದ ಯೋಧ!

Team Udayavani, Jan 21, 2020, 8:51 AM IST

ಹೊಸದಿಲ್ಲಿ: ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸುನಿಲ್‌ ಎಂಬ ಹಿಮಾಚಲ ಪ್ರದೇಶ ಮೂಲದ ಸೈನಿಕನೊಬ್ಬರು ತನ್ನ ಮದುವೆಗೆ ತಾನೇ ಹೋಗಲಾರದ ಸನ್ನಿವೇಶ ಎದುರಿಸಿದ್ದಾರೆ. ಅವರ ಮದುವೆಯನ್ನು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಾಧೋಬಾಲ್‌ ಎಂಬ ಹಳ್ಳಿಯಲ್ಲಿ ಆಯೋಜಿಸಲಾಗಿತ್ತು.

ಗುರುವಾರ (ಜ. 16) ನಡೆಯಬೇಕಿದ್ದ ಈ ಮದುವೆಗೆ ಸುನಿಲ್‌ಗೆ ಸಮಯಕ್ಕೆ ಸರಿಯಾಗಿ ಬರಲು ಆಗಲೇ ಇಲ್ಲ. ಅದಕ್ಕೆ ಕಾರಣ, ಕಾಶ್ಮೀರದಲ್ಲಿ ಎರಡು ವಾರಗಳಿಂದ ಸುರಿಯುತ್ತಿರುವ ಅಗಾಧ ಹಿಮ ಮಳೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದ ಹಿನ್ನೆಲೆಯಲ್ಲಿ ಸುನಿಲ್‌ಗೆ ಪ್ರಯಾಣಿಸಲು ತೊಂದರೆಯಾಗಿದೆ.

ಸೋಮವಾರವಷ್ಟೇ ಶ್ರೀನಗರ ತಲುಪಿರುವ ಅವರು, ತಮ್ಮೂರಿನತ್ತ ಇನ್ನು ಪಯಣಿಸಬೇಕಿದೆ. ಅತ್ತ, ಎರಡೂ ಕಡೆಯ ಕುಟುಂಬಗಳು, ಮದುವೆಗೆ ಹೊಸ ದಿನಾಂಕ ಗೊತ್ತು ಮಾಡಲು ನಿರ್ಧರಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ