ಅರೇ ಸಾಂಬಾರ್‌, ನಿನ್ನ ಮೂಲವೇನು?ಮರಾಠಿಗರದ್ದೇ, ತಮಿಳಿಗರದ್ದೇ ಎಂಬ ವಾದ

Team Udayavani, Nov 22, 2017, 9:29 AM IST

22-18.jpg

ನವದೆಹಲಿ: ಒಡಿಶಾ ಮತ್ತು ಪಶ್ಚಿಮ ಬಂಗಾಳ ರಸಗುಲ್ಲಾ ಸಮರದಲ್ಲಿ ಸಿಹಿ ಮಮತಾ ಬ್ಯಾನರ್ಜಿ ಅವರ ಬಾಯಿಗೆ ಬಿದ್ದಿದ್ದೇ ಬಿದ್ದಿದ್ದು, ಇದೀಗ ದೇಶಾದ್ಯಂತ ಇರುವ ಆಹಾರಗಳ ಮೇಲೆಲ್ಲಾ ಪ್ರಾದೇಶಿಕ ಹಕ್ಕು ಸ್ವಾಮ್ಯತೆಯ ಚರ್ಚೆಗಳು ಶುರುವಾಗಿವೆ.

ಈಗ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸಾಂಬಾರ್‌ ಮೇಲೆ ಜಗಳ ಶುರು ವಾಗಿದೆ. ನಿಜಕ್ಕೂ ಸಾಂಬಾರ್‌ ಎಲ್ಲಿ ಯದ್ದು? ಇದು ಮರಾಠಿಗರಧ್ದೋ, ತಮಿಳಿ ಗರಧ್ದೋ ಎಂಬ ಪ್ರಶ್ನೆ ಎದ್ದಿದೆ. ಸದ್ಯಕ್ಕೆ ಕನ್ನಡಿಗರ ಕಡೆಯಿಂದ ಯಾರೂ ಸಾಂಬಾರ್‌ ನಮ್ಮದೇ ಎಂಬ ವಾದ ಮಂಡಿಸಿಲ್ಲ. ಆದರೂ ಸಾಂಬಾರ್‌ ಮರಾಠರ ನಾಡಿನಿಂದ ತಮಿಳುನಾಡಿಗೆ ಹೋಗಿದ್ದೇ ಕರ್ನಾಟಕದ ಮೂಲಕ ಎಂಬುದು ವಿಶೇಷ. ಅಂದರೆ, ಮರಾಠಿಗರು ದಕ್ಷಿಣ ಭಾರತಕ್ಕೆ ಎಂಟ್ರಿಕೊಟ್ಟಿದ್ದೇ ಬಿಜಾಪುರ ಸುಲ್ತಾನರ ಸೇನಾಪಡೆಗೆ ಪ್ರವೇಶಿಸುವ ಮೂಲಕ.

ಆಗ ಮರಾಠಾ ಸೈನ್ಯದ ಮುಖ್ಯಸ್ಥ ಶಹಾಜಿ. ಶಹಾಜಿ ಎಂದರೆ ಶಿವಾಜಿಯ ತಂದೆ. ಶಹಾಜಿಯ ಸಹಾಯದಿಂದ ಬಿಜಾಪುರದ ಸುಲ್ತಾನ್‌ ದಕ್ಷಿಣ ಕರ್ನಾಟಕದ(ಬೆಂಗಳೂರು ಸೇರಿ) ಬಹಳಷ್ಟು ಭಾಗ ವನ್ನು ವಶಪಡಿಸಿಕೊಂಡಿದ್ದ. ಶಹಾಜಿಯ ಶೌರ್ಯಕ್ಕೆ ಮೆಚ್ಚಿ ಸುಲ್ತಾನ ಬೆಂಗಳೂರು ಸೇರಿದಂತೆ ದಕ್ಷಿಣ ಭಾಗವನ್ನು ಆತನಿಗೆ ಬಳುವಳಿಯಾಗಿ ನೀಡಿದ್ದನಂತೆ. ಶಹಾಜಿ ಮೃತ ನಾದ ಮೇಲೆ ಆತನ ಮಗ ವೆಂಕೋಜಿ ಬೆಂಗಳೂರಿನ ರಾಜನಾಗುತ್ತಾನೆ. ಈತ ನೆರೆಯ ತಂಜಾವೂರನ್ನು ಆಕ್ರಮಿಸಿಕೊಂಡ ಮೇಲೆ ಸಾಂಬಾರ್‌ ಸ್ಟೋರಿ ಆರಂಭವಾಗುತ್ತೆ. ಮರಾಠಿಗರು ಪಶ್ಚಿಮ ಘಟ್ಟದಲ್ಲಿ ಸಿಕ್ಕ ಕೆಂಪು ಬಣ್ಣದ ಪುನರ್ಪುಳಿ ಹಣ್ಣಿನೊಂದಿಗೆ ಬೇಳೆಯನ್ನು ಬಳಸಿ ಸಾಂಬಾರ್‌ ಮಾಡುತ್ತಿದ್ದಂತೆ. ಮುಂದೆಯೂ ಇದೇ ಸಾಂಬಾರ್‌ ಅನ್ನು ಶಹಾಜಿ, ವೆಂಕೋಜಿ ಜತೆಗೆ ಹೋಗುವ ಮರಾಠಿಗರು ತಮಿಳುನಾಡಿನಲ್ಲೂ ಪಸರಿಸುತ್ತಾರೆ ಎಂಬ ಮಾತುಗಳಿವೆ. 

ಸಾಂಬಾಜಿ ಮತು ಸಾಂಬಾರ್‌
ಇನ್ನೊಂದು ಕಥೆ ಎಂದರೆ, ತಂಜಾವೂರಿನ ಆಸ್ಥಾನವನ್ನು ಉಳಿಸಿಕೊಟ್ಟ ಶಿವಾಜಿಯ ಪುತ್ರ ಸಾಂಬಾಜಿಯ ನೆನಪಿಗೋಸ್ಕರ ಸಾಂಬಾರ್‌ ಎಂಬ ಹೆಸರು ಬಂತಂತೆ! ಆದರೆ ವೆಂಕೋಜಿ ಮತ್ತು ಶಿವಾಜಿ ಮಲಮಕ್ಕಳಾಗಿದ್ದು ಇವರಿಬ್ಬರೂ ಒಬ್ಬರನ್ನೊರು ಭೇಟಿಯಾಗಲೇ ಇಲ್ಲ ಎಂಬ ಮಾತುಗಳೂ ಇವೆ.

ಟಾಪ್ ನ್ಯೂಸ್

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.