370ನೇ ವಿಧಿ: ಕಾಂಗ್ರೆಸ್‌ ಈಗ ಒಡೆದ ಮನೆ

Team Udayavani, Aug 7, 2019, 4:00 AM IST

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕರೊಳಗೇ ಭಿನ್ನಮತ ಸೃಷ್ಟಿಯಾಗಿದೆ. ದೇಶಾದ್ಯಂತ ಅನೇಕ ನಾಯಕರು ಸಂಸತ್‌ನಲ್ಲಿ ತಮ್ಮ ಪಕ್ಷ ತೆಗೆದುಕೊಂಡ ನಿಲುವಿಗೆ ವಿರುದ್ಧವಾಗಿ ಮಾತನಾಡಿದ್ದಲ್ಲದೆ, ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಕ್ತ ಕಂಠದಿಂದ ಶ್ಲಾ ಸಿದ್ದಾರೆ.

ಅತ್ತ ಸಂಸತ್‌ನ ಎರಡೂ ಸದನಗಳಲ್ಲಿ ಕಾಂಗ್ರೆಸ್‌ ನಾಯಕರು ಜಮ್ಮು-ಕಾಶ್ಮೀರವನ್ನು ವಿಭಜಿಸುವ ವಿಧೇಯಕವನ್ನು ಖಂಡತುಂಡ ವಾಗಿ ವಿರೋಧಿಸುತ್ತಿದ್ದರೆ, ಇತ್ತ ಕಾಂಗ್ರೆಸ್‌ನ ಹಿರಿಯ ನಾಯಕರಾದ ದ್ವಿವೇದಿ, ದೀಪೇಂ ದರ್‌ ಹೂಡಾ ಸೇರಿದಂತೆ ಅನೇಕರು ವಿಧೇ ಯಕವನ್ನು ಬೆಂಬಲಿಸಿ ಮಾತನಾಡಿದ್ದಾರೆ. ಇದು ಕಾಂಗ್ರೆಸ್‌ನಲ್ಲೇ ಭಿನ್ನ ಅಭಿಪ್ರಾಯ ಗಳಿರುವುದನ್ನು ಸಾಬೀತುಪಡಿಸಿದೆ.

ಐತಿಹಾಸಿಕ ತಪ್ಪು ಸರಿಪಡಿಸಲಾಗಿದೆ: ಕಾಂಗ್ರೆಸ್‌ ಹಿರಿಯ ನಾಯಕ ಜನಾರ್ದನ ದ್ವಿವೇದಿ ಮಾತನಾಡಿ, “370ನೇ ವಿಧಿಯ ನಿಬಂಧನೆಗಳನ್ನು ರದ್ದು ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಇದು ವಿಳಂಬವಾಗಿ ಆಯಿತಾದರೂ, ಐತಿಹಾಸಿಕ ತಪ್ಪೊಂದನ್ನು ಸರಿಪಡಿಸಿದಂತಾಗಿದೆ’ ಎಂದಿದ್ದಾರೆ.

ಸಿದ್ಧಾಂತ ಬದಿಗಿಟ್ಟು ಚರ್ಚಿಸಬೇಕು: ಮುಂಬೈ ಕಾಂಗ್ರೆಸ್‌ ಮುಖ್ಯಸ್ಥ ಮಿಲಿಂದ್‌ ದೇವೊರಾ ಮಾತನಾಡಿ, “37 0ನೇ ವಿಧಿ ರದ್ದತಿಯ ವಿಚಾರವನ್ನು ಪ್ರಗತಿಪರ ವರ್ಸಸ್‌ ಸಂಪ್ರದಾಯವಾದಿ ಚರ್ಚೆಯಾಗಿ ಪರಿವರ್ತಿಸಿರುವುದು ದುರದೃಷ್ಟಕರ. ಎಲ್ಲ ಪಕ್ಷಗಳೂ ತಮ್ಮ ಸೈದ್ಧಾಂತಿಕ ಯೋಚನೆಗಳನ್ನು ಬದಿಗಿಟ್ಟು, ಭಾರತದ ಸಾರ್ವಭೌಮತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮವಾದುದರ ಬಗ್ಗೆ, ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಬಗ್ಗೆ, ಅಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸುವ, ಕಾಶ್ಮೀರಿ ಪಂಡಿತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಚರ್ಚೆ ನಡೆಸಬೇಕಿದೆ’ ಎಂದಿದ್ದಾರೆ. ಇನ್ನು ರಾಯ್‌ಬರೇಲಿಯ ಕಾಂಗ್ರೆಸ್‌ ಶಾಸಕ ಅದಿತಿ ಸಿಂಗ್‌ ಕೂಡ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ನನ್ನ ಸಂಪೂರ್ಣ ಬೆಂಬಲವಿದೆ: ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಕೈಗೊಂಡ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ. ಆದರೆ, ಸಾಂವಿಧಾನಿಕ ಪ್ರಕ್ರಿಯೆಗಳನ್ನು ಅನುಸರಿಸಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು. ಆಗ ಯಾರೂ ಯಾವ ಪ್ರಶ್ನೆಯನ್ನೂ ಎತ್ತುವಂಥ ಸ್ಥಿತಿ ಬರುತ್ತಿರಲಿಲ್ಲ. ಅದೇನೇ ಇದ್ದರೂ, ನಮ್ಮ ದೇಶದ ಹಿತದೃಷ್ಟಿಯಿಂದ ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಕಾಂಗ್ರೆಸ್‌ನ ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್‌ ಮಾಡಿದ್ದಾರೆ.

ಸೋಮವಾರವಷ್ಟೇ ವಿಧೇಯಕ ವಿರೋಧಿಸಿ ಮತ ಹಾಕುವಂತೆ ಪಕ್ಷದ ಸಂಸದರಿಗೆ ವಿಪ್‌ ಜಾರಿ ಮಾಡಿ ಎಂದು ಪಕ್ಷ ಸೂಚಿಸಿದ್ದನ್ನು ತೀವ್ರವಾಗಿ ವಿರೋಧಿಸಿದ್ದ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿದ್ದ ಭುವನೇಶ್ವರ್‌ ಕಾಟಿಯಾ ಅವರು ತಮ್ಮ ಸದಸ್ಯತ್ವಕ್ಕೇ ರಾಜೀನಾಮೆ ನೀಡಿ, ಪಕ್ಷದ ನಿಲುವನ್ನು ಖಂಡಿಸಿದ್ದರು.

ಉತ್ತಮ ನಿರ್ಧಾರ: ಕಾಂಗ್ರೆಸ್‌ ಮತ್ತೊಬ್ಬ ನಾಯಕ ದೀಪೇಂದರ್‌ ಹೂಡಾ ಮಾತನಾಡಿ, ಇದು ದೇಶದ ಸಮಗ್ರತೆಯ ಹಿತಾಸಕ್ತಿಯಿಂದ ಅತ್ಯುತ್ತಮವಾದ ನಿರ್ಧಾರ ಎಂದಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೆಬ್ರಿ: ಶ್ರಾವಣ ಹಬ್ಬಗಳು ಶುರುವಾಗುವ ಮಾಸ. ಈ ಮಾಸದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ, ಮಹಿಳೆಯರಿಗೆ ವಿಶೇಷವಾದ ವರ ಮಹಾಲಕ್ಷ್ಮೀ ಪೂಜೆ, ಚೂಡಿಪೂಜೆಗಳು ನಡೆಯುತ್ತವೆ....

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಬೆಂಗಳೂರು/ವಿಜಯಪುರ: ಪ್ರವಾಹ ಪೀಡಿತ ಪ್ರದೇಶದ ಎಲ್ಲ ಗ್ರಾಮಗಳಲ್ಲಿ ಮುಂದಿನ ಒಂದು ವರ್ಷದವರೆಗೆ ತಾತ್ಕಾಲಿಕ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ರಿಯಾಯಿತಿ ದರದಲ್ಲಿ...

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಶ್ರೀನಗರ: ಕಾಶ್ಮೀರಕ್ಕೆ ನೀಡಲಾ ಗಿದ್ದ ವಿಶೇಷ ಸ್ಥಾನಮಾನ ರದ್ದು ನಿರ್ಧಾ ರದ ಹಿನ್ನೆಲೆ ಯಲ್ಲಿ 12 ದಿನಗಳಿಂದ ಸ್ಥಗಿತ ವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ...

  • ಹೊಸದಿಲ್ಲಿ: ದೇಶದಲ್ಲಿ ಸಂಚರಿಸುವ ಎಲ್ಲ ವೇಗದ ಎಕ್ಸ್‌ ಪ್ರಸ್‌ ರೈಲುಗಳನ್ನು 2022ರೊಳಗೆ ವಿದ್ಯುತ್‌ ಚಾಲಿತ ರೈಲುಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವುದಾಗಿ...