ಉಜ್ಜಯಿನಿಯಲ್ಲಿ ಅರುಣಿಮಾ ಸಿನ್ಹಾಗೆ ಅವಮಾನ
Team Udayavani, Dec 26, 2017, 6:20 AM IST
ಉಜ್ಜಯಿನಿ: ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಗವಿಕಲೆ ಅರುಣಿಮಾ ಸಿನ್ಹಾ, ಉಜ್ಜೆ„ನಿ ಮಹಾಕಾಲ ದೇಗುಲಕ್ಕೆ ತೆರಳಿದಾಗ ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಎವರೆಸ್ಟ್ ಏರಿದ್ದಕ್ಕಿಂತಲೂ ನನಗೆ ಮಹಾಕಾಲ ದೇಗುಲಕ್ಕೆ ತೆರಳುವುದು ಕಷ್ಟವೆನಿಸಿತು. ನನ್ನ ಅಂಗವೈಕಲ್ಯವನ್ನು ದೇಗುಲದಲ್ಲಿ ಹೀಯಾಳಿಸ ಲಾಯಿತು ಎಂದು ಅರುಣಿಮಾ ಟ್ವೀಟ್ ಮಾಡಿದ್ದಾರೆ. ದೇಗುಲಕ್ಕೆ ತೆರಳಿದಾಗ ಟಿಶರ್ಟ್ ಹಾಗೂ ಜೀನ್ಸ್ ಧರಿಸಿ ತೆರಳುವಂತಿಲ್ಲ. ಅಲ್ಲದೆ ಕೃತ್ರಿಮ ಕಾಲುಗಳನ್ನು ಧರಿಸಿದ್ದರಿಂದ ಗರ್ಭಗುಡಿ ಪ್ರವೇಶ ಮಾಡುವಂತಿಲ್ಲ ಎಂದು ಅಲ್ಲಿನ ಭದ್ರತಾ ಸಿಬ್ಬಂದಿ ನನ್ನನ್ನು ತಡೆದರು. ಈ ಬಗ್ಗೆ ಪರಿಪರಿ ಯಾಗಿ ಕೇಳಿಕೊಂಡರೂ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ ಎಂದು ಅರುಣಿಮಾ ಹೇಳಿದ್ದಾರೆ.
ಘಟನೆ ಹೇಗೆ ನಡೆಯಿತು ಎಂದು ತಿಳಿದುಬಂದಿಲ್ಲ ಎಂದು ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.