ಯುವತಿಯರ ಮಾರಾಟ ದಂಧೆ ಆರೋಪಿಯೊಂದಿಗೆ ಕೇಜ್ರಿ; ಫೋಟೋ ವೈರಲ್‌ 

Team Udayavani, Sep 25, 2018, 3:16 PM IST

ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಮಹಿಳೆಯರ ಕಳ್ಳಸಾಗಾಣಿಕೆ ದಂಧೆಯ ಆರೋಪಿ ಪ್ರಭಾ ಮುನ್ನಿ ಅವರೊಂದಿಗಿನ ಚಿತ್ರ ವೈರಲ್‌ ಆಗಿದೆ. 

5 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಪ್ರಭಾಮುನ್ನಿಯನ್ನು ಪೊಲೀಸರು ಬಂಧಿಸಿದ ಒಂದು ದಿನದ ಬಳಿಕ ಈ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಫೋಟೋದಲ್ಲಿ ಕಂಡು ಬಂದಂತೆ ಕೇಜ್ರಿವಾಲ್‌ ಅವರು ಪ್ರಭಾಮುನ್ನಿಯೊಂದು  ನಗುತ್ತಾ ಕುಳಿತಿದ್ದಾರೆ.

ಎನ್‌ಜಿಓವೊಂದನ್ನು ನಡೆಸುತ್ತಿದ್ದ ಪ್ರಭಾಮುನ್ನಿ ಜಾರ್ಖಂಡ್‌ನಿಂದ ನೂರಾರು ಯುವತಿಯರನ್ನು ಮಾನವ ಕಳ್ಳಸಾಗಾಣಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಭಾರೀ ದಂಧೆಯಲ್ಲಿ ಹಲವು ಯುವತಿಯರಿಗೆ ಉದ್ಯೋಗದ ಆಮಿಷ ಒಡ್ಡಿ  ಬಳಿಕ ಮಾರಾಟ ಮಾಡಿದ್ದಳು. 2013 ರಿಂದ ತಲೆ ಮರೆಸಿಕೊಂಡಿದ್ದಳು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ