ಯಶಸ್ವಿಯಾದ ವೈದ್ಯರ ಮುಷ್ಕರ; ತುರ್ತು ವಿಚಾರಣೆ ಅನಗತ್ಯ: ಸುಪ್ರೀಂ ಕೋರ್ಟ್‌

Team Udayavani, Jun 18, 2019, 12:12 PM IST

ಹೊಸದಿಲ್ಲಿ : ಪಶ್ಚಿಮ ಬಂಗಾಲ ಮತ್ತು ಇತರ ರಾಜ್ಯಗಳಲ್ಲಿ ವೈದ್ಯರು ತಮ್ಮ ಮುಷ್ಕರ ಯಶಸ್ವಿಯಾಗಿರುವ ಕಾರಣ ಅದನ್ನು ಹಿಂಪಡೆದಿರುವುದರಿಂದ ಸರಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಭದ್ರತೆ ಮತ್ತು ಸುರಕ್ಷೆಯನ್ನು ಕೋರಿದ ಅರ್ಜಿಯ ತುರ್ತು ವಿಚಾರಣೆಯ ಅಗತ್ಯ ಈಗ ಇಲ್ಲವಾಗಿದೆ; ಆದುದರಿಂದ ತಾನು ಅದನ್ನು ಮುಂದಕ್ಕೆ ಹಾಕುತ್ತಿರುವುದಾಗಿ ಇಂದು ಮಂಗಳವಾರ ಹೇಳಿದೆ.

ಹಾಗಿದ್ದರೂ ವೈದ್ಯರ ಸುರಕ್ಷೆ ಮತ್ತು ಭದ್ರತೆಗೆ ಸಂಬಂಧಿಸಿ ಮಹತ್ತರ ವಿಷಯವನ್ನು ತಾನು ಮುಕ್ತವಾಗಿ ಇರಿಸಿರುವುದಾಗಿ ಹೇಳಿದೆ.

ಜಸ್ಟಿಸ್‌ ದೀಪಕ್‌ ಗುಪ್ತಾ ಮತ್ತು ಜಸ್ಟಿಸ್‌ ಸೂರ್ಯ ಕಾಂತ್‌ ಅವರನ್ನು ಒಳಗೊಂಡ ಪೀಠ, ಈಗ ಮುಗಿದಿರುವ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿ ನಾವು ಕೇಂದ್ರಕ್ಕೆ ನೊಟೀಸ್‌ ಜಾರಿ ಮಾಡುವುದಿಲ್ಲ ಎಂದು ಹೇಳಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ