ಅಸಾದುದ್ದೀನ್ ಓವೈಸಿ ಬಳಿ ಕಾರಿಲ್ಲ; ಆದರೆ 13 ಕೋಟಿ ಆಸ್ತಿಯ ಒಡೆಯ
Team Udayavani, Mar 19, 2019, 6:11 AM IST
ಹೈದರಾಬಾದ್ : ಎಐಎಂಐಎಂ ಪಕ್ಷದ ಅಧ್ಯಕ್ಷರಾಗಿರುವ ಹೈದರಾಬಾದ್ ಹಾಲಿ ಸಂಸದ ಅಸಾದುದ್ದೀನ್ ಓವೈಸಿ ಅವರು ಹದಿಮೂರು ಕೋಟಿಯ ಆಸ್ತಿಯ ಒಡೆಯ.
ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಿರುವ ಓವೈಸಿ ತಮ್ಮ ಆಸ್ತಿಪಾಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಆ ಪ್ರಕಾರ ಓವೈಸಿ ಅವರ ಸ್ಥಿರಾಸ್ತಿ 12 ಕೋಟಿ ರೂ. ಮತ್ತು ಚರಾಸ್ತಿ 1.67 ಕೋಟಿ ರೂ. ಎಂಬುದು ಖಚಿತಪಟ್ಟಿದೆ. ಇದನ್ನು ಓವೈಸಿ ಅವರು ಇಂದು ಸಲ್ಲಿಸಿರುವ ನಾಮಪತ್ರ ಜತೆಗಿನ ಅಫಿದಾವಿತ್ನಲ್ಲಿ ಘೋಷಿಸಿಕೊಂಡಿದ್ದಾರೆ.
ಅಂದ ಹಾಗೆ ಓವೈಸಿ ಅವರ ಬಳಿ ಯಾವುದೇ ಮೋಟಾರು ವಾಹನ ಇಲ್ಲ; ಆದರೆ ಅವರ ಬಳಿ ಒಂದು ಎನ್ಪಿ ಬೋರ್ ಪಾಯಿಂಟ್ 22 ಪಿಸ್ತೂಲು ಇದೆ; ಇದರ ಅಂದಾಜು ಮೌಲ್ಯ 1 ಲಕ್ಷ ರೂ. ಮತ್ತು ಇನ್ನೊಂದು ಎನ್ಪಿ ಬೋರ್ 30 – 60 ರೈಫಲ್ ಇದೆ; ಇದರ ಮೌಲ್ಯ 1 ಲಕ್ಷ ರೂ.
ಓವೈಸಿ ಅವರಿಗೆ ಸಾಲ ಬಾಧ್ಯತೆಯೂ ಇದೆ; ಅದು 9.30 ಕೋಟಿ ರೂ. ಗಳದ್ದಾಗಿದೆ.
ಓವೈಸಿ ಹೇಳಿರುವಂತೆ ಅವರ ಕೈಯಲ್ಲಿ 2 ಲಕ್ಷ ರೂ. ನಗದು ಇದೆ. 2017-18ರಲ್ಲಿ ಓವೈಸಿ ವಾರ್ಷಿಕ ಆದಾಯ 10,01,080 ರೂ. 2016-17ರಲ್ಲಿ ಇದು 13,33,250 ರೂ. ಇತ್ತು.
ತನ್ನ ವಿರುದ್ಧ ಐದು ಕ್ರಿಮಿನಲ್ ಕೇಸುಗಳು ವಿಚಾರಣೆಗೆ ಬಾಕಿ ಇವೆ ಎಂದಿದ್ದಾರೆ ಓವೈಸಿ.
ಅಂದ ಹಾಗೆ ಓವೈಸಿ ಅವರು ಹೈದರಾಬಾದಿನಿಂದ ಲೋಕಸಭೆಗೆ ನಿರಂತರ ನಾಲ್ಕನೇ ಬಾರಿಯ ಗೆಲುವಿಗೆ ಸ್ಪರ್ಧಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ