ಅಸಾರಾಂ ಪುತ್ರ ನಾರಾಯಣ ಸಾಯಿಗೆ ಜೀವಾವಧಿ ಶಿಕ್ಷೆ

Team Udayavani, May 1, 2019, 6:08 AM IST

ಸೂರತ್‌: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿನ ಪುತ್ರ ನಾರಾಯಣ್‌ ಸಾಯಿಗೆ (47) ಇಲ್ಲಿನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಜತೆಗೆ, 1 ಲಕ್ಷ ರೂ. ದಂಡವನ್ನೂ ವಿಧಿಸಿರುವ ನ್ಯಾಯಾಧೀಶ ಪಿ.ಎಸ್‌. ಗಾಧ್ವಿ, ಆತನಿಂದ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದೂ ಸೂಚಿಸಿದೆ. ಇನ್ನು, ನಾರಾಯಣ್‌ ಸಾಯಿಯ ಕುಕೃತ್ಯಗಳಿಗೆ ಸಹಾಯ ಮಾಡುತ್ತಿದ್ದ ಆರೋಪ ಹೊತ್ತಿರುವ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಹಾಯಕರಿಗೆ ತಲಾ 10 ವರ್ಷ ಜೈಲು ಶಿಕ್ಷೆ ಹಾಗೂ ನಾರಾಯಣ್‌ನ ಕಾರು ಚಾಲಕ ರಮೇಶ್‌ ಮಲ್ಹೋತ್ರಾಗೆ ಆರು ತಿಂಗಳ ಕಾರಾಗೃಹ ಶಿಕ್ಷೆ ಪ್ರಕಟಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ