ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ
Team Udayavani, Aug 1, 2021, 10:04 PM IST
ನವದೆಹಲಿ: ಕೇಂದ್ರ ಆಯುಷ್ ಸಚಿವಾಲಯವು ಯು.ಕೆ.ಯ ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್(ಎಲ್ಎಸ್ಎಚ್ಟಿಎಂ) ಜತೆ ಸೇರಿ ಕೊರೊನಾ ಸೋಂಕಿಗೆ ಅಶ್ವಗಂಧ ರಾಮಬಾಣವೇ ಎಂಬ ಕುರಿತು ಜಂಟಿಯಾಗಿ ಅಧ್ಯಯನ ನಡೆಸಲು ಮುಂದಾಗಿದೆ.
ಈಗಾಗಲೇ ಆಯುಷ್ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಅಖೀಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ) ಮತ್ತು ಎಲ್ಎಸ್ಎಚ್ಟಿಎಂ ನಡುವೆ ಈ ಕುರಿತು ಒಪ್ಪಂದ ನಡೆದಿದೆ. ಅದರಂತೆ, ಯು.ಕೆ.ಯ ಮೂರು ನಗರಗಳಾದ ಲೈಸೆಸ್ಟರ್, ಬರ್ಮಿಂಗ್ಹ್ಯಾಂ ಮತ್ತು ಲಂಡನ್ನಲ್ಲಿ ಸುಮಾರು 2 ಸಾವಿರ ಮಂದಿಯ ಮೇಲೆ ಅಶ್ವಗಂಧದ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
ಈ ಅಧ್ಯಯನವು ಯಶಸ್ವಿಯಾದರೆ, ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಗೆ ವೈಜ್ಞಾನಿಕ ಮಾನ್ಯತೆ ದೊರೆತಂತಾಗಲಿದೆ. ಅಶ್ವಗಂಧವು ದೇಹದ ಶಕ್ತಿ ವೃದ್ಧಿಸುವುದಲ್ಲದೇ, ಒತ್ತಡವನ್ನು ತಗ್ಗಿಸಿ, ರೋಗನಿರೋಧಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಂಥ ಸಾಂಪ್ರದಾಯಿಕ ಗಿಡಮೂಲಿಕೆಯಾಗಿದೆ.