‘ಕೈ’ ಕುಯ್ದುಕೊಂಡು ರಕ್ತದಲ್ಲಿ ಪೋಸ್ಟರ್ ಬರೆದ ಶಾಸಕ

Team Udayavani, Dec 3, 2019, 11:55 PM IST

ಗುವಾಹಟಿ: ವಿಕ್ಷಿಪ್ತ ಶೈಲಿಯ ಪ್ರತಿಭಟನೆಗಳಿಗೆ ಹೆಸರಾಗಿರುವ ಅಸ್ಸಾಂ ಕಾಂಗ್ರೆಸ್‌ ಶಾಸಕ ರೂಪಿ ಜ್ಯೋತಿ ಕುರ್ಮಿ ಮಂಗಳವಾರ ಅಸ್ಸಾಂ ವಿಧಾನಸಭೆ ಆವರಣದಲ್ಲಿ ತಮ್ಮ ಅಂಗೈ ಕುಯ್ದುಕೊಂಡು ರಕ್ತದಿಂದ ಪೋಸ್ಟರ್‌ ಬರೆದು ಪ್ರತಿಭಟಿಸಿ ಸುದ್ದಿಯಾಗಿದ್ದಾರೆ.

ಅಸ್ಸಾಂ ಸರಕಾರ ನಷ್ಟದಲ್ಲಿರುವ ಸಂಸ್ಥೆಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದನ್ನು ವಿರೋಧಿಸಿ ಅವರು ಪತ್ರಕರ್ತರು, ವಿಪಕ್ಷ ನಾಯಕರ ಎದುರೇ ಬ್ಲೇಡಿನಿಂದ ಅಂಗೈ ಕುಯ್ದುಕೊಂಡು, ನೆತ್ತರಿನಿಂದ ಸರಕಾರದ ನಿರ್ಧಾರವ ಖಂಡಿಸಿ ಘೋಷಣೆಗಳನ್ನು ಬರೆದಿದ್ದಾರೆ. ಬಳಿಕ ಅವರನ್ನು ವಿಧಾನಸಭೆಯ ವೈದ್ಯಕೀಯ ತುರ್ತು ಸೇವೆ ಕೋಣೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ