ಅಸ್ಸಾಂ ಇನ್ನೂ ಅಸ್ಥಿರ:ಈವರೆಗೆ 108 ಸಾವು: ಬ್ರಹ್ಮಪುತ್ರಾ ಇನ್ನಿತರ ನದಿಗಳಲ್ಲಿ ಇಳಿಯದ ಉಬ್ಬರ
ಸಿಲ್ಚಾರ್‌ನಲ್ಲಿ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್, ಸೇನೆ ನಿಯೋಜನೆ
Team Udayavani, Jun 24, 2022, 10:45 PM IST
ಗುವಾಹಟಿ: ಅಸ್ಸಾಂನಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರೂ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ಸಂಬಂಧಿತ ಅವಘಡಗಳು ಮುಂದುವರಿದಿವೆ. ಶುಕ್ರವಾರದ ಹೊತ್ತಿಗೆ, ಆ ರಾಜ್ಯದಲ್ಲಿ ಮಳೆಯಿಂದಾಗಿ ಸಂಭವಿಸಿರುವ ಸಾವಿನ ಸಂಖ್ಯೆ 108ಕ್ಕೇರಿದೆ.
ಪ್ರವಾಹ ಪೀಡಿತ ಕೆಲ ಪ್ರದೇಶಗಳಲ್ಲಿ ನೀರು ಕೊಂಚ ಇಳಿಕೆಯಾಗುತ್ತಿದೆಯಾದರೂ, ಬ್ರಹ್ಮಪುತ್ರ ಹಾಗೂ ಬರಾಕ್ ನದಿಗಳಲ್ಲಿನ ಉಬ್ಬರ ಇಳಿಕೆಯಾಗಿಲ್ಲ. ಸುಮಾರು 45.34 ಲಕ್ಷ ಜನರು ಇನ್ನೂ ಸೂಕ್ತ ನೆಲೆಯಿಲ್ಲದೆ ಪರದಾಡುವಂಥ ಪರಿಸ್ಥಿತಿ ಏರ್ಪಟ್ಟಿದೆ. ಬರಾಕ್ ಕಣಿವೆಯ ರಹದಾರಿ ಎಂದೇ ಕರೆಯಲ್ಪಡುವ ಸಿಲ್ಚಾರ್‌ನ ಬಹುತೇಕ ಪ್ರಾಂತ್ಯಗಳು ಮುಳುಗಡೆಯಾಗಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 207 ಸಿಬ್ಬಂದಿಯನ್ನು ಇಟಾನಗರ ಹಾಗೂ ಭುವನೇಶ್ವರದಿಂದ ಕರೆಯಿಸಿಕೊಳ್ಳಲಾಗಿದೆ. ಜೊತೆಗೆ, ದಿಂಪುರದಿಂದ ಸೇನೆಯ 120 ಯೋಧರ ತಂಡವನ್ನು ಪರಿಹಾರ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ. ಸಿಲ್ಚಾರ್‌ನ ಜಲಾವೃತ ಪ್ರದೇಶಗಳಲ್ಲಿನ ಕಾರ್ಯಾಚರಣೆಗೆ 9 ದೋಣಿಗಳನ್ನು ನಿಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಟ್ವೀಟ್ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ವಿಚಲಿತಗೊಳಿಸಿದ್ದೇಕೆ ?
ಭಾರತದಲ್ಲಿ 24ಗಂಟೆಯಲ್ಲಿ 16,047 ಕೋವಿಡ್ ಸೋಂಕು ಪ್ರಕರಣ ಪತ್ತೆ, 54 ಮಂದಿ ಸಾವು
ಪುಲ್ವಾಮಾ: ತಪ್ಪಿದ ಭಾರೀ ದುರಂತ-30 ಕೆಜಿ ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಸೇನೆ
ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ : ಎಂಟು ಮಹಿಳೆಯರು ಸೇರಿ 9 ಮಂದಿ ಸಾವು
ಭಾರತದಲ್ಲಿ ಮಹಿಳಾ ಪೈಲಟ್ ಪ್ರಮಾಣ ಅಮೆರಿಕಕ್ಕಿಂತ ಹೆಚ್ಚು!
MUST WATCH
ಹೊಸ ಸೇರ್ಪಡೆ
ಕೇಂದ್ರ ಸಚಿವ ಅಮಿತ್ ಶಾ, ಬಿಎಸ್ ವೈ ಭೇಟಿ ವೇಳೆ ಸಿಎಂ ಬೊಮ್ಮಾಯಿ ಬಗ್ಗೆ ಚರ್ಚೆಯಾಗಿದ್ದೇನು?
ಕುತ್ಯಾರು : ಸಾವಿನಲ್ಲೂ ಒಂದಾದ ಕೃಷಿಕ ದಂಪತಿ : ಒಂದೇ ಚಿತೆಯಲ್ಲಿ ಅಂತಿಮ ಸಂಸ್ಕಾರ
ನಾಲ್ವರ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ವಿಚಾರ: ಅಧಿಕಾರಿಗಳ ಸಭೆ ಬಳಿಕ ನಿರ್ಧಾರ; ಗೃಹ ಸಚಿವ
ನನ್ನಲ್ಲೂ ದಾಖಲೆಗಳಿವೆ… ನಿಮ್ಮಕಂಪನಿಗಳ ಕತೆ ಬಿಚ್ಚಿಡಬೇಕೇ? ಅಶ್ವತ್ಥನಾರಾಯಣ ವಿರುದ್ಧ HDK
ಆರ್ ಟಿಪಿಎಸ್ ನಲ್ಲಿ ಕಲ್ಲಿದ್ದಲು ಪೂರೈಸುವ ಪೈಪ್ ಲೈನ್ ಒಡೆದು ಒಂದನೇ ಘಟಕ ಸ್ಥಗಿತ