ಲಡಾಖ್ ಉಳಿಸಲು ಸೋನಂ ವಾಂಗ್ಚುಕ್ ಉಪವಾಸ
Team Udayavani, Jan 27, 2023, 7:22 PM IST
ನವದೆಹಲಿ: ಲಡಾಖ್‌ನ ಹಯಾಲ್ ಕ್ಯಾಂಪಸ್‌ನಲ್ಲಿ ಸತತ ಎರಡು ದಿನಗಳಿಂದ ಉಪವಾಸ ನಡೆಸುತ್ತಿರುವ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಲಡಾಖನ್ನು ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
ಲಡಾಖ್‌ನ ಸೂಕ್ಷ್ಮ, ದುರ್ಬಲ ಪರಿಸರ ವ್ಯವಸ್ಥೆ, ಅಲ್ಲಿನ ನೀರ್ಗಲ್ಲುಗಳನ್ನು ಉಳಿಸಲು ಸಂವಿಧಾನದ 6ನೇ ಪರಿಚ್ಛೇದದ ಅಡಿ ಪ್ರಧಾನಿ ಮುಂದಾಗಬೇಕು. ಅಲ್ಲದೇ ಖರ್ದುಂಗ್ಲಾ ಪಾಸ್‌ಗೆ ಪ್ರವೇಶಿಸಲು ನನಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಸೋನಮ್, ಒಟ್ಟಾರೆ ಐದು ದಿನಗಳ ಉಪವಾಸ ನಡೆಸುವುದಾಗಿ ತಮ್ಮ 2.16 ನಿಮಿಷದ ವಿಡಿಯೋದಲ್ಲಿ ಹೇಳಿದ್ದಾರೆ. ಖರ್ದುಂಗ್ಲದಲ್ಲಿ ವಿಪರೀತ ಹಿಮಪಾತ ಆಗುತ್ತಿರುವುದರಿಂದ ಅಲ್ಲಿಗೆ ಪ್ರವೇಶಿಸಲು ಸ್ಥಳೀಯ ಆಡಳಿತ ಅನುಮತಿ ನೀಡಿಲ್ಲ.