ಇಲ್ಲಿ ನಿತ್ಯ ಬೆಳಗ್ಗೆ ರಾಷ್ಟ್ರಗೀತೆ ಮೊಳಗುತ್ತೆ!
Team Udayavani, Aug 11, 2022, 8:00 PM IST
ಹೈದರಾಬಾದ್: ಈ ಹಳ್ಳಿಯಲ್ಲಿ ಬೆಳಗ್ಗೆ ಸರಿಯಾಗಿ ಎಂಟೂವರೆ ಗಂಟೆಗೆ ರಾಷ್ಟ್ರಗೀತೆ ಮೊಳಗುತ್ತದೆ. ಹಳ್ಳಿಯಲ್ಲಾಗಲೀ, ಹಳ್ಳೆಯಾಚೆಗಿನ ಹೊಲಗದ್ದೆಗಳಲ್ಲಿ ಕಾರ್ಯನಿರತರಾಗಿರುವ ಜನ, ವಾಹನ ಚಲಾಯಿಸುತ್ತಿರುವ ಜನ, ತಮ್ಮ ಕೆಲಸಗಳನ್ನು ಬದಿಗಿಟ್ಟು ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸುತ್ತಾರೆ.
ತೆಲಂಗಾಣದ ನಲಗೊಂಡ ಜಿಲ್ಲೆಯ ತಿಪ್ಪರ್ತಿ ಎಂಬ ಗ್ರಾಮದಲ್ಲಿ ಇಂಥದ್ದೊಂದು ವಿಶೇಷ ಇದೇ ಜ. 27ರಿಂದ ಚಾಲ್ತಿಯಲ್ಲಿದೆ. “ಜನಗಣಮನ ಉತ್ಸವ’ ಎಂಬ ಸಮಿತಿ ವತಿಯಿಂದ ಇದನ್ನು ನಿತ್ಯವೂ ಅನುಷ್ಠಾನಗೊಳಿಸಲಾಗುತ್ತಿದೆ.
ಪ್ರತಿದಿನ ಬೆ. 8.10ಕ್ಕೆ ದೇಶಭಕ್ತಿ ಗೀತೆಗಳ ಪ್ರಸಾರ ಶುರು ಮಾಡಲಾಗುತ್ತದೆ. ಆ ಮೂಲಕ, ಜನರಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಮಾನಸಿಕವಾಗಿ ಅಣಿಗೊಳಿಸಲಾಗುತ್ತದೆ. 8.29ಕ್ಕೆ ಸರಿಯಾಗಿ ರಾಷ್ಟ್ರಗೀತೆಯನ್ನು ಬಗ್ಗೆ ಜನರಿಗೆ ಸಂದೇಶ ರವಾನೆಯಾಗುತ್ತದೆ. ಆನಂತರ, 8.30ಕ್ಕೆ ಸರಿಯಾಗಿ ರಾಷ್ಟ್ರಗೀತಿ ಆರಂಭವಾಗುತ್ತದೆ. ಈ ಪರಿಪಾಠವನ್ನು ನಿತ್ಯವೂ ರೂಢಿಸಿಕೊಂಡು ಬಂದಿದ್ದೇವೆ ಎಂದು ಜನಗಣಮನ ಉತ್ಸವ ಸಮಿತಿಯ ಅಧ್ಯಕ್ಷ ಕಾರ್ನಾಟಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ