ಅಟ್ಟಾರಿ-ವಾಘಾ ರಿಟ್ರೀಟ್: ಇನ್ನು ಆನ್ಲೈನ್ನಲ್ಲೇ ಬುಕಿಂಗ್
Team Udayavani, Dec 7, 2022, 6:55 AM IST
ನವದೆಹಲಿ: ಪಂಜಾಬ್ನ ಅಟ್ಟಾರಿ-ವಾಘಾ ಗಡಿಯಲ್ಲಿ ಪ್ರತಿದಿನ ನಡೆಯುವ ಪಥಸಂಚಲನ (ರಿಟ್ರೀಟ್) ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಇಚ್ಛೆ ನಿಮಗಿದೆಯೇ? ಇನ್ನು ಮುಂದೆ ನೀವು ಈ ಕಾರ್ಯಕ್ರಮದ ವೀಕ್ಷಣೆಗೆ ಆನ್ಲೈನ್ನಲ್ಲೇ ಟಿಕೆಟ್ ಬುಕ್ ಮಾಡಬಹುದು.
2023ರ ಜ.1ರಿಂದ ಈ ಸೌಲಭ್ಯ ಆರಂಭವಾಗಲಿದೆ. ಆಸನ ಬುಕಿಂಗ್ಗೆಂದೇ ಗಡಿ ಭದ್ರತಾ ಪಡೆ (ಬಿಎಸ್ಎಫ್) http://attari.bsf.gov.in ಎಂಬ ವೆಬ್ ಪೋರ್ಟಲ್ ಆರಂಭಿಸಿದೆ. ಈವರೆಗೆ ರಿಟ್ರೀಟ್ ನಡೆಯುವ ಸ್ಥಳಕ್ಕೆ ಹೋದಾಗ, ನಿಮ್ಮ ಗುರುತಿನ ಚೀಟಿ ನೋಡಿ ಬಿಎಸ್ಎಫ್ ಯೋಧರೇ ನಿಮಗೆ ಆಸನ ಹಂಚಿಕೆ ಮಾಡುತ್ತಿದ್ದರು. ಇನ್ನು ಮುಂದೆ, ನೀವು ಆನ್ಲೈನ್ನಲ್ಲೇ ಆಸನವನ್ನು ಕಾಯ್ದಿರಿಸಬೇಕು. ಅದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
48 ಗಂಟೆಗಳ ಮುನ್ನ ಬುಕಿಂಗ್ ಮಾಡಬೇಕು. ಆನ್ಲೈನ್ನಲ್ಲೇ ಫೋಟೋ ಐಡಿ ಕಾರ್ಡ್ ವಿವರಗಳನ್ನೂ ನೀಡಬೇಕು. ಬುಕಿಂಗ್ ವಿವರಗಳನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಮೂಲಕ ರವಾನಿಸಲಾಗುತ್ತದೆ ಎಂದು ಬಿಎಸ್ಎಫ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ