Udayavni Special

ನಿಫಾ ವೈರಸ್‌ ಗೋವಾ, ಮುಂಬಯಿಗೂ ಹಬ್ಬುವ ಭೀತಿ; ಕಟ್ಟೆಚ್ಚರ


Team Udayavani, May 22, 2018, 11:53 AM IST

nipha-virus-700.jpg

ಹೊಸದಿಲ್ಲಿ : ಕೇರಳದಲ್ಲಿ ಈಗಾಗಲೇ 9 ಜೀವಗಳನ್ನು ಬಲಿತೆಗೆದುಕೊಂಡಿರುವ ಅತ್ಯಂತ ಮಾರಣಾಂತಿಕ ನಿಫಾ ವೈರಸ್‌ ಜ್ವರ ಇದೀಗ ಗೋವಾ ಮತ್ತು ಮುಂಬಯಿಗೂ ಹಬ್ಬುವ ಭೀತಿ ತಲೆದೋರಿದ್ದು ಅಲ್ಲಿನ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿರುವುದಾಗಿ ವರದಿಗಳು ತಿಳಿಸಿವೆ.

ನಿಫಾ ವೈರಸ್‌ ಬಗ್ಗೆ ಕಟ್ಟೆಚ್ಚರದಿಂದರಲು ಗೋವೆಯ ಆರೋಗ್ಯ ಇಲಾಖೆ ರಾಜ್ಯದಲ್ಲಿನ ಎಲ್ಲ ಆಸ್ಪತ್ರೆಗಳನ್ನು ಕೇಳಿಕೊಂಡಿದೆ. ಅಂತೆಯೇ ಕೇರಳದಿಂದ ಗೋವೆಗೆ ಆಗಮಿಸುವವರರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಗೋವೆಯ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ತಿಳಿಸಿದ್ದಾರೆ. ಕೇಂದ್ರ ಸರಕಾರದ ಆದೇಶದ ಪ್ರಕಾರ ರಾಜ್ಯದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದವರು ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಅತ್ಯಪರೂಪದ ಆದರೆ ಮಾರಣಾಂತಿಕ ಎನಿಸಿಕೊಂಡಿರುವ ನಿಫಾ ವೈರಸ್‌ನ ಹರಡುವಿಕೆ ಮತ್ತು ಅದರ ಪರಿಣಾಮಗಳ ಕುರಿತಾಗಿ ಗೋವಾ ಸರಕಾರ ಕೇರಳ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಸಚಿವ ರಾಣೆ ಹೇಳಿದರು. 

ಕಳವಳದ ಸಂಗತಿ ಎಂದರೆ ನಿಫಾ ವೈರಸ್‌ ಪೀಡಿತ ವ್ಯಕ್ತಿಗಳಿಗೆ ಅಥವಾ ಪ್ರಾಣಿಗಳಿಗೆ ಯಾವುದೇ ರೀತಿಯ ವ್ಯಾಕ್ಸಿನ್‌ಗಳು ಲಭ್ಯವಿಲ್ಲ. ಮನುಷ್ಯರ ಸಂದರ್ಭದಲ್ಲಿ ತೀವ್ರ ನಿಗಾ ಸೇವೆಯಷ್ಟೇ ಪ್ರಾಥಮಿಕ ಚಿಕಿತ್ಸಾ ಕ್ರಮವಾಗಿದೆ.

ಕಲ್ಲಿಕೋಟೆ ವರದಿ

ಕೇರಳದ ಕಲ್ಲಿಕೋಟೆಯಲ್ಲಿ ನಿಫಾ ವೈರಸ್‌ ಸೋಂಕು ಹರಡಿರುವುದರಿಂದ ಇಡೀ ರಾಜ್ಯದ ಜನರು ಆತಂಕಗೊಂಡಿದ್ದಾರೆ. ನೂರಾರು ಜನರು ಸಮೀಪದ ಗ್ರಾಮಗಳಿಂದ ಆಸ್ಪತ್ರೆಗೆ ಆಗಮಿಸು ತ್ತಿದ್ದು, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ರೋಗದ ಭೀತಿ ವ್ಯಕ್ತಪಡಿಸುತ್ತಿದ್ದಾರೆ. ಈ ವರೆಗೆ ಒಟ್ಟು 9 ಜನರು ಈ ರೋಗದಿಂದ ಸಾವನ್ನಪ್ಪಿದ್ದು, 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 20 ಜನರನ್ನು ಪರಿವೀಕ್ಷಣೆಯಲ್ಲಿಡಲಾಗಿದೆ.

ಚೆರುವನೂರು ಮತ್ತು ಪೆರಂಬ್ರಾ ಗ್ರಾಮದ 30 ಕುಟುಂಬಗಳು ಮತ್ತು 150 ಜನರನ್ನು ಸ್ಥಳಾಂತರಿಸಲಾಗಿದೆ. ಬಾಧಿತ ಪ್ರದೇಶಗಳ ಜನರು 2 ವಾರಗಳವರೆಗೆ ಎಲ್ಲಿಗೂ ಪ್ರಯಾಣಿಸ ದಂತೆ, ಯಾರನ್ನೂ ಸಂಪರ್ಕಿಸದಂತೆ ಸೂಚಿಸಲಾಗಿದೆ. ರೋಗ ಹರಡುವ ಭೀತಿಯಿಂದಾಗಿ ಮೃತರ ಅಂತ್ಯ ಸಂಸ್ಕಾರಕ್ಕೆ ಕುಟುಂಬದವರಿಗೂ ಅವಕಾಶ ನೀಡಲಾಗುತ್ತಿಲ್ಲ.

ವೈರಸ್‌ಗಳು ಬಾವಲಿಗಳಿಂದಲೂ ಹರಡುತ್ತಿದ್ದು, ಅಧಿಕಾರಿಗಳು ಬಾವಲಿಗಳನ್ನು ಸೆರೆಹಿಡಿದು ಸಾಯಿಸುತ್ತಿದ್ದಾರೆ. ಗ್ರಾಮಗಳಲ್ಲಿ ಕೆಲವು ದಿನಗಳ ಹಿಂದೆ ಒಂದಷ್ಟು ಬಾವಲಿಗಳು ಹಾಗೂ ಹಕ್ಕಿಗಳು ಸಾವನ್ನಪ್ಪಿದ್ದು ಕಂಡುಬಂದಿತ್ತು. ಆದರೆ ಗ್ರಾಮಸ್ಥರು ನಿರ್ಲಕ್ಷಿಸಿದ್ದರು. ಆಸ್ಪತ್ರೆಯಲ್ಲಿ ಮೊದಲು ದಾಖಲಾದ ನಿಫಾ ಸೋಂಕಿನ ವ್ಯಕ್ತಿಗೆ ಚಿಕಿತ್ಸೆ ನೀಡಿದ ನರ್ಸ್‌ ಕೂಡ ವೈರಸ್‌ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಳಿಕ ವೈದ್ಯಕೀಯ ಸಿಬಂದಿಗೂ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕಳೆದ ಎರಡು ದಿನಗಳಿಂದಲೂ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಆಸ್ಪತ್ರೆಯಲ್ಲಿದ್ದು, ಮೇಲುಸ್ತುವಾರಿ ವಹಿಸಿದ್ದಾರೆ.

ಮೊದಲು ಕಂಡು ಬಂದಿದ್ದು ಮಲೇಷ್ಯಾದಲ್ಲಿ

ಈ ರೋಗ ಮೊದಲು ಕಂಡುಬಂದಿದ್ದು 1998-99ರಲ್ಲಿ ಮಲೇಷ್ಯಾ, ಸಿಂಗಾಪುರದಲ್ಲಿ. ಮಲೇಷ್ಯಾದ ನಿಫಾ ಎಂಬ ಹಳ್ಳಿಯಲ್ಲಿ ಮೊದಲು ಕಂಡಿದ್ದರಿಂದ ಈ ರೋಗಕ್ಕೆ ಈ ಹೆಸರಿಡಲಾಗಿದೆ. ಇಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 265 ಜನರಿಗೆ ರೋಗ ತಗುಲಿತ್ತು. ಹಂದಿಗಳಿಂದ ಈ ರೋಗ ಹರಡಿದ್ದು, 100ಕ್ಕೂ ಹೆಚ್ಚು ಹಂದಿಗಳಲ್ಲಿ ರೋಗ ಕಾಣಿಸಿಕೊಂಡಿತ್ತು.

ವಿಶಿಷ್ಟ  ಪ್ರಭೇದದ ವೈರಸ್‌

ಪ್ಯಾರಾಮಿಕೊವಿರಿಡೆ ಪ್ರಭೇದದ ವೈರಸ್‌ ಈ ಹಿಂದೆ ಭಾರತದಲ್ಲಿ 2-3 ಬಾರಿ ಕಾಣಿಸಿಕೊಂಡಿದ್ದ‌ ನಿಫಾ ವೈರಸ್‌ 2001ರಲ್ಲಿ ಮೊದಲು ಬಾಂಗ್ಲಾದಲ್ಲಿ, ಅನಂತರ ಭಾರತದ ಸಿಲಿಗುರಿಯಲ್ಲಿ ವೈರಸ್‌ ಪತ್ತೆ

ಸ್ಥಳಕ್ಕೆ ಮಣಿಪಾಲ ವೈದ್ಯರು

ಉಡುಪಿ: ನಿಫಾ ಜ್ವರ ಕಂಡು ಬಂದಿರುವ ಕೇರಳದ ಕಲ್ಲಿಕೋಟೆಗೆ ಮಣಿಪಾಲದ ವೈದ್ಯರು ಧಾವಿಸಿದ್ದಾರೆ. ಮಣಿಪಾಲದ ವೈರಲ್‌ ಇನ್‌ಸ್ಟಿಟ್ಯೂಟ್‌ ಮುಖ್ಯಸ್ಥ ಡಾ| ಅರುಣ್‌ ಕುಮಾರ್‌ ಅವರು ತೆರಳಿದ್ದು ಅಲ್ಲಿನ ಜನರಿಗೆ ಮಾರ್ಗ ದರ್ಶನ ನೀಡುತ್ತಿದ್ದಾರೆ. ಮಣಿಪಾಲದ ಆಸ್ಪತ್ರೆಗೆ ಪರೀಕ್ಷೆಗಾಗಿ ಜ್ವರಪೀಡಿತರ ರಕ್ತದ ಮಾದರಿಗಳನ್ನು ಕಳುಹಿಸಲಾಗಿದೆ. 

ಗುಣ-ಲಕ್ಷಣಗಳೇನು?

ದೇಹಕ್ಕೆ ಪ್ರವೇಶಿಸಿದ 7-14 ದಿನಗಳಲ್ಲಿ ನಿಶ್ಚಲವಾಗಿರುವ ವೈರಸ್‌, ಅನಂತರ ವೇಗವಾಗಿ ಹರಡುತ್ತದೆ. ಮಿದುಳು ಊತ, ಹಠಾತ್‌ ಜ್ವರ, ಉಸಿರು ಕಡಿಮೆ ಯಾಗುವುದು, ರಕ್ತದೊತ್ತಡ ಕಡಿಮೆಯಾಗುವುದು, ತಲೆನೋವು, ಮಿದುಳಿನ ಉರಿಯೂತ, ಅಮಲು, ಶ್ವಾಸಕೋಶ ಸೋಂಕು, ಮಾನಸಿಕ ಗೊಂದಲ ಮುಂತಾದ ಗುಣಲಕ್ಷಣ ಕಾಣಿಸಿಕೊಳ್ಳುತ್ತದೆ. ರೋಗಿಯನ್ನು ವೆಂಟಿಲೇಟರ್‌ನಲ್ಲಿ ಇಡುವುದು ಅಗತ್ಯವಾಗುತ್ತದೆ. 24ರಿಂದ 48 ತಾಸುಗಳಲ್ಲಿ ರೋಗಿ ಕೋಮಾಗೂ ಹೋಗಬಹುದು.

ಸಾಂಕ್ರಾಮಿಕ ರೋಗ

ಗಾಳಿಯಿಂದ ಅಥವಾ ಜೊಲ್ಲಿನಿಂದ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಗಾಳಿಯಿಂದ ಹರಡುವ ಬಗ್ಗೆ ಸಾಬೀತಾಗಿಲ್ಲದಿದ್ದರೂ ಹಂದಿ, ಬಾವಲಿ ಅಥವಾ ಹಕ್ಕಿಗಳ ಮೂಲಕ ಇದು ಹರಡುವುದು ಖಚಿತಗೊಂಡಿದೆ. ಮುಖ್ಯವಾಗಿ ಬಾವಲಿಗಳು ಕಚ್ಚಿದ ಹಣ್ಣನ್ನು ಸೇವಿಸ ಲೇಬಾರದು ಎಂದು ಆರೋಗ್ಯ ಇಲಾಖೆ ಖಡಾಖಂಡಿತವಾಗಿ ತಿಳಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

2006ರಲ್ಲಿ ಬಾಳೆಹೊನ್ನೂರು ಕ್ಷೇತ್ರದ ರಂಭಾಪುರಿ ಶ್ರೀಗಳಲ್ಲಿ ಗುಟ್ಟು ಹೇಳಿದ್ದ ಎಸ್ ಪಿಬಿ

2006ರಲ್ಲಿ ಬಾಳೆಹೊನ್ನೂರು ಕ್ಷೇತ್ರದ ರಂಭಾಪುರಿ ಶ್ರೀಗಳಲ್ಲಿ ಗುಟ್ಟು ಹೇಳಿದ್ದ ಎಸ್ ಪಿಬಿ

1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪ.ಪಂ ಕಂಪ್ಯೂಟರ್ ಆಪರೇಟರ್ ಕುಮಾರಸ್ವಾಮಿ

1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

spb

ಎಸ್.ಪಿ.ಬಿ ಸ್ವರಲೀನ: ಸಂಗೀತ ಗೌರವ ಸಲ್ಲಿಸಿದ ಎ.ಆರ್ ರೆಹಮಾನ್

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ

ಕಾಯ್ದೆಯಲ್ಲಿ ಬದಲಾವಣೆಗೆ ಒಪ್ಪದ ಸಿಎಂ: ರೈತರ ಜೊತೆ ಸಭೆ ವಿಫಲ, ಸೆ.28ರಂದು ಬಂದ್ ಖಚಿತ

ಕಾಯ್ದೆಯಲ್ಲಿ ಬದಲಾವಣೆಗೆ ಒಪ್ಪದ ಸಿಎಂ: ರೈತರ ಜೊತೆ ಸಭೆ ವಿಫಲ, ಸೆ.28ರಂದು ಬಂದ್ ಖಚಿತ

‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB ಅವರ ಧ್ವನಿ’: ಹಿರಿಯ ನಟ ಅನಂತ್ ಕಂಬನಿ

‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB ಅವರ ಧ್ವನಿ’: ಹಿರಿಯ ನಟ ಅನಂತ್ ಕಂಬನಿ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ

ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ: ಅ.28 ರಿಂದ ನ. 7ವರಗೆ 3 ಹಂತದಲ್ಲಿ ಮತದಾನ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani



ಹೊಸ ಸೇರ್ಪಡೆ

2006ರಲ್ಲಿ ಬಾಳೆಹೊನ್ನೂರು ಕ್ಷೇತ್ರದ ರಂಭಾಪುರಿ ಶ್ರೀಗಳಲ್ಲಿ ಗುಟ್ಟು ಹೇಳಿದ್ದ ಎಸ್ ಪಿಬಿ

2006ರಲ್ಲಿ ಬಾಳೆಹೊನ್ನೂರು ಕ್ಷೇತ್ರದ ರಂಭಾಪುರಿ ಶ್ರೀಗಳಲ್ಲಿ ಗುಟ್ಟು ಹೇಳಿದ್ದ ಎಸ್ ಪಿಬಿ

ಛಲ ಬಿಡದ ನಾಯಕ ನಾರಾಯಣರಾವ್‌

ಛಲ ಬಿಡದ ನಾಯಕ ನಾರಾಯಣರಾವ್‌

1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪ.ಪಂ ಕಂಪ್ಯೂಟರ್ ಆಪರೇಟರ್ ಕುಮಾರಸ್ವಾಮಿ

1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

spb

ಎಸ್.ಪಿ.ಬಿ ಸ್ವರಲೀನ: ಸಂಗೀತ ಗೌರವ ಸಲ್ಲಿಸಿದ ಎ.ಆರ್ ರೆಹಮಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.