ಕಾಶ್ಮೀರದ ಸೇನಾ ಕ್ಯಾಂಪ್ ಮೇಲೆ ಮತ್ತೆ ಭೀಕರ ಹಿಮಪಾತ: 10 ಯೋಧರು ಬಲಿ
Team Udayavani, Jan 26, 2017, 1:51 PM IST
ಶ್ರೀನಗರ : ಕಾಶ್ಮೀರದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದ್ದು,2 ಪ್ರತ್ಯೇಕ ಅವಘಡದಲ್ಲಿ ಗುರೇಜ್ ಸೆಕ್ಟರ್‌ನ ಸೇನಾ ಕ್ಯಾಂಪ್‌ಗಳ ಮೇಲೆ ಮೇಲೆ ಹಿಮ ಬಂಡೆ ಕುಸಿದು 10 ಮಂದಿ ಸೈನಿಕರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಗುರುವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ನಾಲ್ವರು ಸೈನಿಕರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಇನ್ನಿಬ್ಬರು ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಬುಧವಾರ ಗಾಂದೇರ್‌ಬಾಲ್ ಮತ್ತು ಬಂಡಿಪೋರಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಪ್ರತ್ಯೇಕ ಹಿಮಪಾತದಲ್ಲಿ ಸೇನಾಧಿಕಾರಿ ಮತ್ತು ಕುಟುಂಬವೊಂದರ ನಾಲ್ವರು ಸದಸ್ಯರು ಮೃತಪಟ್ಟಿದ್ದರು.