ಎಸ್‌ಪಿ-ಬಿಎಸ್‌ಪಿ ಕಾರ್ಯಕರ್ತರು ಕತ್ತಿನ ಪಟ್ಟಿ ಹಿಡಿಯುತ್ತಿದ್ದಾರೆ: ಪ್ರಧಾನಿ ಮೋದಿ

ಎಸಿ ರೂಂನಲ್ಲಿ ಮೈತ್ರಿ ಮಾಡಿಕೊಂಡವರಿಗೆ ತಳಮಟ್ಟದ ವಾಸ್ತವತೆಯ ಅರಿವಿಲ್ಲ..

Team Udayavani, May 16, 2019, 5:05 PM IST

ಮಿರ್ಜಾಪುರ್‌: ಚುನಾವಣೆ ಸೋಲು ಖಚಿತವಾದ ಹಿನ್ನಲೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಕಾರ್ಯಕರ್ತರು ಪರಸ್ಪರ ಕತ್ತಿನ ಪಟ್ಟಿ ಹಿಡಿದಿದ್ದಾರೆಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿಕೆ ನೀಡಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ , ಇತ್ತೀಚೆಗೆ ನಡೆದೆಎಸ್‌ಪಿ-ಬಿಎಸ್‌ಪಿ ಕಾರ್ಯಕರ್ತರ ಘರ್ಷಣೆಯನ್ನು ಉಲ್ಲೇಖ ಮಾಡಿದರು. ನಾಯಕರು ಎಸಿ ರೂಂ ಗಳಲ್ಲಿ ಕುಳಿತು ಮಾತನಾಡುತ್ತಾರೆ ಆದರೆ ತಳಮಟ್ಟವಾಸ್ತವತೆ ಅವರಿಗೆ ಅರಿವಿಲ್ಲ ಎಂದರು.

ಮಾಯಾವಾತಿ ಮತ್ತು ಅಖೀಲೇಶ್‌ ಅವರು ಭ್ರಷ್ಟರು ಎನ್ನುವುದು ಜನರಿಗೆ ಗೊತ್ತಿದೆ. ಹಣದ ಕಂತೆಯ ಮೇಲೆ ಕುಳಿತು ತಮ್ಮನ್ನು ತಾವು ಸಮಾಜವಾದಿಗಳು ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಎರಡೂ ಪಕ್ಷಗಳು ಉತ್ತರಪ್ರದೇಶವನ್ನು ನಕ್ಸಲಿಸಂನತ್ತ ಒಯ್ಯಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.

ಎನ್‌ಡಿಎ ಈ ಬಾರಿ 300 ಸ್ಥಾನಗಳನ್ನು ದಾಟಿ ಸರ್ಕಾರ ರಚಿಸುವುದು ಖಚಿತ ಎಂದು ಪ್ರಧಾನಿ ಹೇಳಿದರು.

ಉತ್ತರಪ್ರದೇಶದ 12 ಲೋಕಸಭಾ ಕ್ಷೇತ್ರಗಳಲ್ಲಿ 7 ನೇ ಮತ್ತು ಕೊನೆಯ ಹಂತದ ಮತದಾನಮೇ 19 ರಂದು ನಡೆಯಲಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ