ಇಂದು ಸುಪ್ರೀಂನಿಂದ ಅಯೋಧ್ಯೆ ಸಂಧಾನ ಪ್ರಗತಿ ವಿಚಾರಣೆ

Team Udayavani, May 10, 2019, 6:00 AM IST

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ವಿವಾದವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ನೀಡಿದ್ದ ಸುಪ್ರೀಂಕೋರ್ಟ್‌, ಈ ಪ್ರಕ್ರಿಯೆಯ ಪ್ರಗತಿ ಪರಿಶೀಲನೆಯನ್ನು ಶುಕ್ರವಾರ ನಡೆಸಲಿದೆ. ಈ ಮಧ್ಯೆ ರಾಜಿ ಸಂಧಾನ ಸಮಿತಿಯು ಮಧ್ಯಂತರ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ವರದಿಯಲ್ಲಿ ಯಾವ ಅಂಶಗಳನ್ನು ಉಲ್ಲೇಖೀಸಲಾಗಿದೆ ಎಂಬುದು ತಿಳಿದುಬಂದಿಲ್ಲ. 6ರಂದೇ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು.

ರಾಜಿ ಸಂಧಾನಕ್ಕೆ ಮಾ. 8 ರಂದು ಆದೇಶ ನೀಡಿದ ನಂತರ ಇದೇ ಮೊದಲ ಬಾರಿಗೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ನಡೆಸುತ್ತಿದೆ. ರಾಜಿ ಸಂಧಾನ ಸಮಿತಿಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್. ಎಂ. ಐ. ಖಲೀಫ‌ುಲ್ಲಾ ಮುಖ್ಯಸ್ಥರಾಗಿದ್ದು, ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಮತ್ತು ಹಿರಿಯ ವಕೀಲ ಶ್ರೀರಾಮ್‌ ಪಂಚು ಸದಸ್ಯರಾಗಿದ್ದಾರೆ. ಈ ಸಮಿತಿ ಪ್ರಕ್ರಿಯೆಆರಂಭಿಸಿದ್ದು, ಎಲ್ಲ ದೂರುದಾರರ ಪ್ರತಿನಿಧಿಗಳ ಸಭೆಯನ್ನೂ ಈಗಾಗಲೇ ನಡೆಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ