ಅಯೋಧ್ಯೆ ವಿಚಾರಣೆ ಜ. 29ಕ್ಕೆ ಮುಂದೂಡಿಕೆ

Team Udayavani, Jan 11, 2019, 12:30 AM IST

q-402.jpg

ಹೊಸದಿಲ್ಲಿ: ಅಯೋಧ್ಯೆಯ ವಿವಾದಿತ ಭೂಮಿ ಕುರಿತಂತೆ ವಿಚಾರಣೆ ಆರಂಭವಾಗಿ ಲೋಕಸಭೆ ಚುನಾವಣೆಗೂ ಮುನ್ನ ತೀರ್ಪು ಬಂದೇ ಬಿಡುತ್ತದೆ ಎಂದು ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ. ಮುಖ್ಯ ನ್ಯಾ| ರಂಜನ್‌ ಗೊಗೊಯ್‌ ನೇತೃತ್ವದ ಸಂವಿಧಾನ ಪೀಠದಿಂದ ನ್ಯಾ| ಯು.ಯು. ಲಲಿತ್‌ ಹಿಂದೆ ಸರಿದ‌ ಹಿನ್ನೆಲೆಯಲ್ಲಿ ಹೊಸ ಪೀಠ ರಚಿಸಬೇಕಾಗಿದ್ದು, ಜ.29ರಿಂದ ವಿಚಾರಣೆ ಶುರುವಾಗಲಿದೆ. ಈ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ವಿವಾದಿತ 2.77 ಎಕರೆ ಜಮೀನಿನ ಮಾಲಕತ್ವದ ತೀರ್ಮಾನ ಆಗುವುದು ಅನುಮಾನ. 

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 1997ರಲ್ಲಿ ನ್ಯಾ| ಯು.ಯು. ಲಲಿತ್‌ ವಾದಿಸಿದ್ದರು. ಗುರು ವಾರ ಕೋರ್ಟ್‌ ಹಾಲ್‌ನಲ್ಲಿ ಎಲ್ಲರೂ ಸೇರುತ್ತಿದ್ದಂತೆ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್‌ ಧವನ್‌ ನ್ಯಾಯಪೀಠಕ್ಕೆ ಈ ಮಾಹಿತಿ ನೀಡಿದರು. ಆದರೆ ನ್ಯಾ| ಯು.ಯು. ಲಲಿತ್‌ ವಿಚಾರಣೆಯಿಂದ ಹಿಂದೆ ಸರಿಯ ಬೇಕು ಎಂದು ಮನವಿ ಮಾಡುವುದಿಲ್ಲ ಎಂದರು. ಇದರ ಜತೆಗೆ ಹಿಂದಿನ ಸಂದರ್ಭ ದಲ್ಲಿ  ಪ್ರಕರಣದ ವಿಚಾರಣೆ ವೇಳೆ ತ್ರಿಸದಸ್ಯ ನ್ಯಾಯ ಪೀಠ ವಿಚಾರಣೆ ನಡೆಸಿದರೆ ಸಾಕು. ಐವರು ಸದಸ್ಯರ ಸಾಂವಿಧಾನಿಕ ಪೀಠ ರಚನೆ ಅಗತ್ಯ ವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದನ್ನು ನ್ಯಾಯಪೀಠದ ಗಮನಕ್ಕೆ ತಂದರು. ಪೀಠದಲ್ಲಿ ನ್ಯಾ| ಎಸ್‌.ಎ. ಬೋಬ್ದೆ, ನ್ಯಾ| ಎನ್‌.ವಿ. ರಮಣ, ನ್ಯಾ| ಡಿ.ವೈ. ಚಂದ್ರಚೂಡ್‌ ಇದ್ದಾರೆ. 1997ರ ಪ್ರಕರಣದಲ್ಲಿ ಕಲ್ಯಾಣ್‌ ಸಿಂಗ್‌ 1 ದಿನ ಕಾರಾಗೃಹ ವಾಸ ಅನುಭವಿಸಿದ್ದರು. ತಮಗೇನೂ ಇದರಿಂದ ಸಮಸ್ಯೆ ಇಲ್ಲ. ಪೀಠ ದಲ್ಲಿ ಇರುವ ಬಗ್ಗೆ ನ್ಯಾ| ಲಲಿತ್‌ ನಿರ್ಧರಿಸಬೇಕು ಎಂದರು ಧವನ್‌.                    

ರಾಮ ಲಲ್ಲ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಹರೀಶ್‌ ಸಾಳ್ವೆ ಕೂಡ ಧವನ್‌ ವಾದಕ್ಕೆ ಬೆಂಬಲ ಸೂಚಿಸಿದರು. ಅದಕ್ಕೆ ಉತ್ತರಿಸಿದ ಮುಖ್ಯ ನ್ಯಾ| ಗೊಗೊಯ್‌ ಯಾರಿಗೆ ಸಮಸ್ಯೆಯಾಗುತ್ತದೆ ಎಂಬ ವಿಚಾರ ಮುಖ್ಯವಲ್ಲ. ನ್ಯಾಯಪೀಠದ ಮುಂದೆ ಯಾವ ವಿಷಯ ಮಂಡಿಸಲಾಗಿದೆ ಎನ್ನುವುದು ಮುಖ್ಯ. ನ್ಯಾ| ಲಲಿತ್‌ ಕೂಡ ವಿಚಾರಣೆಯಿಂದ ಹಿಂದೆ ಸರಿಯುವ ಅಭಿಪ್ರಾಯವನ್ನೇ ಹೊಂದಿದ್ದಾರೆ ಎಂದು ಹೇಳಿದರು. ಜತೆಗೆ ಸುಪ್ರೀಂ ಕೋರ್ಟ್‌ ನಿಯಮಗಳ ಪ್ರಕಾರ ಮುಖ್ಯ ನ್ಯಾಯಮೂರ್ತಿಗೆ ನ್ಯಾಯಪೀಠ ರಚಿಸುವ ಹಕ್ಕು ಇದೆ ಎಂದರು.

ವಿಎಚ್‌ಪಿ ಟೀಕೆ: ಈ ಬೆಳವಣಿಯಿಂದ ವಿಶ್ವ ಹಿಂದೂ ಪರಿಷತ್‌ ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಯೋಧ್ಯೆ ವಿಚಾರದಲ್ಲಿ ವಿಪಕ್ಷಗಳು ಕೋರ್ಟ್‌ ನಲ್ಲಿ ಶೀಘ್ರ ತೀರ್ಮಾನವಾಗುವುದನ್ನು ತಪ್ಪಿಸುತ್ತಿವೆ. ನ್ಯಾಯಪೀಠದಲ್ಲಿ ಮುಸ್ಲಿಂ ನ್ಯಾಯಮೂರ್ತಿ ಇಲ್ಲವೆಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರು ಪ್ರತಿಪಾದಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ಆಲೋಕ್‌ ಕುಮಾರ್‌ ಟೀಕಿಸಿದ್ದಾರೆ. ಹಿಂದೂಗಳು ತಮ್ಮ ತಾಳ್ಮೆ ಪ್ರವೃತ್ತಿಗೆ ಹೆಸರಾಗಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್‌ ಹೆಚ್ಚು ವಿಳಂಬ ಮಾಡದೆ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಬೇಕು ಎಂದು ಕುಮಾರ್‌ ಒತ್ತಾಯಿಸಿದ್ದಾರೆ. 

ಲೈವ್‌ ಸ್ಟ್ರೀಮಿಂಗ್‌ಗೆ ಆಗ್ರಹ
ಜ.29ರಿಂದ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಲೈವ್‌ ಸ್ಟ್ರೀಮಿಂಗ್‌ ಮಾಡಬೇಕು ಎಂದು ಆರ್‌ಎಸ್‌ಎಸ್‌ನ ಹಿರಿಯ ನಾಯಕ ಕೆ.ಎನ್‌. ಗೋವಿಂದಾಚಾರ್ಯ ಒತ್ತಾ ಯಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಮತ್ತು ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿ ದ್ದಾರೆ. ಇದರಿಂದ ಕೋರ್ಟ್‌ ಹಾಲ್‌ನಲ್ಲಿ ಯಾವ ರೀತಿ ವಾದ ಮಂಡನೆ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸೆ.26ರಂದು ಕೋರ್ಟ್‌ ಕಲಾಪಗಳನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಉಲ್ಲೇಖೀಸಿದ್ದಾರೆ. 

13 ಸಾವಿರ ಪುಟಗಳ ದಾಖಲೆ
ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿ ಜ. 29ರ ಒಳಗಾಗಿ ಮೊಹರು ಮಾಡಿರುವ 15 ಟ್ರಂಕ್‌ಗಳಲ್ಲಿರುವ 13,886 ಪುಟಗಳಲ್ಲಿ ದಾಖಲಾಗಿರುವ 88 ಸಾಕ್ಷಿಗಳ ವಿವರ, 257 ವೀಡಿಯೋ ಮತ್ತು ದಾಖಲೆ ಗಳ ವಿವರಗಳನ್ನು ಪರಿಶೀಲಿಸಿ ಸಿದ್ಧಪಡಿಸ ಬೇಕಾಗಿದೆ. ಹಿಂದಿ, ಅರಬಿ, ಗುರುಮುಖಿ, ಪರ್ಷಿಯನ್‌, ಉರ್ದು ಭಾಷೆಗಳಲ್ಲಿರುವ ದಾಖಲೆಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಇನ್ನಷ್ಟೇ ಮಾಡಬೇಕಾಗಿದೆ. ಹಿಂದಿನ ಕೋರ್ಟ್‌ ಆದೇಶ ಮತ್ತು ದಾಖಲೆಗಳು 4,304 ಮುದ್ರಿತ ಮತ್ತು 8,533 ಟೈಪ್‌ ಮಾಡಿದ ಪುಟಗಳನ್ನು ಹೊಂದಿವೆ. 

ಟಾಪ್ ನ್ಯೂಸ್

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

cm-b-bommai

ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ನಿರ್ಬಂಧ: ಸಿಎಂ ಬೊಮ್ಮಾಯಿ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

shivaraj-kumar

ಪುನೀತ್ ಡ್ರೀಮ್ ಪ್ರಾಜೆಕ್ಟ್ ಟೀಸರ್ ಬಿಡುಗಡೆಗೆ ಸಿಎಂಗೆ ಆಹ್ವಾನ ನೀಡಿದ ಶಿವಣ್ಣ

1-ff

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಕೆ. ರೋಸಯ್ಯ ವಿಧಿವಶ

ಪಾಕಿಸ್ತಾನ; ಧರ್ಮನಿಂದನೆ ಆರೋಪ, ಲಂಕಾ ಪ್ರಜೆಗೆ ಬೆಂಕಿ ಹಚ್ಚಿ ಸಜೀವ ದಹನ

ಪಾಕಿಸ್ತಾನ; ಧರ್ಮನಿಂದನೆ ಆರೋಪ, ಲಂಕಾ ಪ್ರಜೆಗೆ ಬೆಂಕಿ ಹಚ್ಚಿ ಸಜೀವ ದಹನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

1-ff

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಕೆ. ರೋಸಯ್ಯ ವಿಧಿವಶ

ಮದುರೈ: ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಹೋಟೆಲ್, ಮಾಲ್ ಗೆ ಪ್ರವೇಶಕ್ಕೆ ನಿರ್ಬಂಧ

ಮದುರೈ: ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಹೋಟೆಲ್, ಮಾಲ್ ಗೆ ಪ್ರವೇಶಕ್ಕೆ ನಿರ್ಬಂಧ

1-raod

ಉದ್ಘಾಟನೆಗೆ ತೆಂಗಿನಕಾಯಿ ಒಡೆದಾಗ ಬಿರುಕು ಬಿಟ್ಟ ಹೊಸ ರಸ್ತೆ !

ಭಾರತದಲ್ಲಿ 8,603 ಕೋವಿಡ್ ಪ್ರಕರಣ ಪತ್ತೆ: ಶೇ.98ರಷ್ಟು ಚೇತರಿಕೆ ಪ್ರಮಾಣ

ಭಾರತದಲ್ಲಿ 8,603 ಕೋವಿಡ್ ಪ್ರಕರಣ ಪತ್ತೆ: ಶೇ.98ರಷ್ಟು ಚೇತರಿಕೆ ಪ್ರಮಾಣ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

10kannada

ಕನ್ನಡ-ತಮಿಳು ಪರಸ್ಪರ ಆಪ್ತ ಸಂಬಂಧ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

cm-b-bommai

ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ನಿರ್ಬಂಧ: ಸಿಎಂ ಬೊಮ್ಮಾಯಿ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.