ತಾಜ್ ಮಹಲ್ ಧ್ವಂಸಗೊಳಿಸಿದ್ರೆ ಯುಪಿ ಸರ್ಕಾರಕ್ಕೆ ಬೆಂಬಲ; ಖಾನ್!

Team Udayavani, Oct 4, 2017, 11:46 AM IST

ಲಕ್ನೋ:ಸದಾ ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಇದೀಗ, ಒಂದು ವೇಳೆ ಉತ್ತರ ಪ್ರದೇಶ ಸರ್ಕಾರ ವಿಶ್ವವಿಖ್ಯಾತ ತಾಜ್ ಮಹಲ್ ಅನ್ನು ಧ್ವಂಸಗೊಳಿಸಿದರೆ, ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರವನ್ನು ಬೆಂಬಲಿಸುವುದಾಗಿ ಪುನರುಚ್ಚರಿಸುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಕೆಲವು ದಶಕಗಳ ಹಿಂದೆಯೇ ತಾಜ್ ಮಹಲ್ ಅನ್ನು ಒಡೆದು ಹಾಕಬೇಕೆಂದು ಧ್ವನಿ ಎತ್ತುವ ಮೂಲಕ ಅಜಂ ಖಾನ್ ವಿವಾದಕ್ಕೀಡಾಗಿದ್ದರು. ತಾಜ್ ಮಹಲ್, ಕೆಂಪು ಕೋಟೆ, ಪಾರ್ಲಿಮೆಂಟ್, ಕುತುಬ್ ಮಿನಾರ್ ಗಳೆಲ್ಲ ಗುಲಾಮಗಿರಿಯ ಸಂಕೇತಗಳಾಗಿವೆ. ಒಂದು ವೇಳೆ ತಾಜ್ ಮಹಲ್ ಅನ್ನು ಧ್ವಂಸಗೊಳಿಸಿದರೆ ತಾವು ಯುಪಿ ಸರ್ಕಾರವನ್ನು ಬೆಂಬಲಿಸುವುದಾಗಿ ಖಾನ್ ತಿಳಿಸಿದ್ದಾರೆ.

ಪ್ರವಾಸೋದ್ಯಮ ಸಚಿವೆ ರೀಟಾ ಬಹುಗುಣ್ ಪ್ರವಾಸಿ ಕೈಪಿಡಿಯನ್ನು ಬಿಡುಗಡೆಗೊಳಿಸಿದ ಬಳಿಕ ಅಜಂಖಾನ್ ಈ ಪ್ರತಿಕ್ರಿಯೆನ್ನು ನೀಡಿದ್ದಾರೆ. ಉತ್ತರಪ್ರದೇಶ ಪ್ರವಾಸೋದ್ಯಮ ಇಲಾಖೆ ರಾಜ್ಯದಲ್ಲಿನ ಸಾಂಸ್ಕೃತಿಕ ಮತ್ತು ವಿಶ್ವಪಾರಂಪರಿಕ ಸ್ಥಳಗಳ ಕುರಿತು 32 ಪುಟಗಳ ಕೈಪಿಡಿಯನ್ನು ಬಿಡುಗಡೆಗೊಳಿಸಿತ್ತು. ಆದರೆ ಕೈಪಿಡಿಯಲ್ಲಿ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಕುರಿತು ಯಾವುದೇ ಮಾಹಿತಿಯಾಗಲಿ, ಉಲ್ಲೇಖವಾಗಲಿ ಇಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ