ರಾಷ್ಟ್ರಪತಿ ಭವನ, ಸಂಸತ್‌ ಭವನವನ್ನೂ ಧ್ವಂಸ ಮಾಡಿ: ಆಜಂ ಖಾನ್‌

Team Udayavani, Oct 17, 2017, 12:08 PM IST

ಹೊಸದಿಲ್ಲಿ : ”ಆಗ್ರಾದಲ್ಲಿ ತಾಜಮಹಲ್‌ ಭಾರತೀಯ ಸಂಸ್ಕೃತಿಯಲ್ಲಿನ ಕಪ್ಪು ಚುಕ್ಕೆ ಎಂದು ಹೇಳಬಹುದಾದರೆ ರಾಷ್ಟ್ರಪತಿ ಭವನ ಮತ್ತು ಸಂಸತ್‌ ಭವನ ಗುಲಾಮಗಿರಿಯ ಸಂಕೇತ ಎಂದು ಹೇಳಬಹುದು. ಆದುದರಿಂದ ತಾಜಮಹಲ್‌ ಕಟ್ಟಡವನ್ನು ನೀವು ಧ್ವಂಸ ಮಾಡುವಿರಾದರೆ ರಾಷ್ಟಪತಿ ಭವನ, ಸಂಸತ್‌ ಭವನವನ್ನೂ ಧ್ವಂಸ ಮಾಡಿ” ಎಂದು ವಿವಾದಾತ್ಮಕ ಹೇಳಿಕೆಗಳಿಗೆ ಖ್ಯಾತರಾಗಿರುವ ಆಜಂ ಖಾನ್‌ ಸವಾಲು ಹಾಕಿದ್ದಾರೆ.

ಬಿಜೆಪಿಯ ಶಾಸಕ ಸಂಗೀತ್‌ ಸೋಮ್‌ ಅವರು “ತಾಜಮಹಲ್‌ ಕಟ್ಟಡ ದ್ರೋಹಿಗಳ ನಿರ್ಮಾಣ. ಅಂತೆಯೇ ಅದು ಭಾರತೀಯ ಇತಿಹಾಸದಲ್ಲಿ, ಸಂಸ್ಕೃತಿಯಲ್ಲಿನ ಕಪ್ಪು ಚುಕ್ಕೆಯಾಗಿದೆ” ಎಂದು ವಿವಾದ್ಮಾಕ ಹೇಳಿಕೆ ನೀಡಿದ್ದರು.

ಇದಕ್ಕೆ ಉತ್ತರವೆಂಬಂತೆ ಆಜಂ ಖಾನ್‌ ಅವರು, “ಭಾರತದಲ್ಲಿ ಬ್ರಿಟಿಷರು ನಿರ್ಮಿಸಿದ ಕಟ್ಟಡಗಳು ಮತ್ತು ಸ್ಮಾರಕಗಳು ಭಾರತೀಯರ ಗುಲಾಮಗಿರಿಯ ಸಂಕೇತಗಳಾಗಿರುವುದರಿಂದ ಅವುಗಳನ್ನು ಧ್ವಂಸ ಮಾಡಬೇಕು; ಭಾರತೀಯ ಸಂಸ್ಕೃತಿಯಲ್ಲಿನ ಕಪ್ಪು ಚುಕ್ಕೆ ಎಂಬ ಕಾರಣಕ್ಕೆ ತಾಜಮಹಲ್‌ ಕಟ್ಟಡವನ್ನು ಧ್ವಂಸ ಮಾಡುವುದೇ ಆದರೆ ಬ್ರಿಟಿಷ್‌ ಗುಲಾಮಗಿರಿಯ ಸಂಕೇತಗಳಾಗಿರುವ ರಾಷ್ಟ್ರಪತಿ ಭವನ, ಸಂಸತ್‌ ಭವನವನ್ನು ಕೂಡ ಧ್ವಂಸ ಮಾಡಬಹುದಾಗಿದೆ’ ಎಂದು ವ್ಯಂಗ್ಯವಾಡಿದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ