ಆಜಂ ಖಾನ್‌ ಕ್ಷಮೆ ಸಾಲದು

Team Udayavani, Jul 28, 2019, 5:31 AM IST

ನವದೆಹಲಿ: ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್‌ ಕ್ಷಮೆ ಕೋರಿದರೂ, ನಾನು ಅವರನ್ನು ಕ್ಷಮಿಸುವುದಿಲ್ಲ. ಹೀಗೆಂದು ಬಿಜೆಪಿ ಸಂಸದೆ, ಡೆಪ್ಯುಟಿ ಸ್ಪೀಕರ್‌ ರಮಾ ದೇವಿ ಹೇಳಿದ್ದಾರೆ. ‘ಅವರು ಆಕ್ಷೇಪಾರ್ಹ ಮಾತುಗಳನ್ನು ಆಡಿದಾಗ ಸ್ಪೀಕರ್‌ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಆ ಹುದ್ದೆಯನ್ನು ಎಲ್ಲರೂ ನಿಷ್ಪಕ್ಷವಾಗಿ ನೋಡುತ್ತಾರೆ. ನಾನೂ ಎಲ್ಲರನ್ನೂ ಅದೇ ದೃಷ್ಟಿಕೋನದಿಂದ ಪರಿಗಣಿಸಿದ್ದೆ. ಖಾನ್‌ ನೇರವಾಗಿ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್‌ರನ್ನು ಉದ್ದೇಶಿಸಿ ಮಾತನಾಡುವಂತೆ ಹೇಳಿದೆ. ಆದರೆ ಅವರು ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದರು’ ಎಂದು ಟೀಕಿಸಿದ್ದಾರೆ. ಖಾನ್‌ರ ಹೇಳಿಕೆಯಿಂದ ಮಹಿಳೆಯರಿಗೆ ನೋವಾಗಿದೆ ಮಾತ್ರವಲ್ಲ, ಪುರುಷರ ಗೌರವಕ್ಕೂ ಧಕ್ಕೆಯಾಗಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ