ಬಿ. ಆರ್‌. ಶೆಟ್ಟಿ ಕೊಲೆ ಯತ್ನ ಪ್ರಕರಣದಲ್ಲಿ ಛೋಟಾ ರಾಜನ್‌ಗೆ 8 ವರ್ಷ ಜೈಲು ಶಿಕ್ಷೆ

Team Udayavani, Aug 20, 2019, 8:09 PM IST

ಮುಂಬಯಿ: 2012ರಲ್ಲಿ ಹೊಟೇಲ್‌ ಉದ್ಯಮಿ ಬಿ. ಆರ್‌. ಶೆಟ್ಟಿ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಗ್ಯಾಂಗ್‌ಸ್ಟರ್‌ ರಾಜೇಂದ್ರ ನಿಖಲೆj ಅಲಿಯಾಸ್‌ ಛೋಟಾ ರಾಜನ್‌ ಮತ್ತು ಇತರ ಐದು ಮಂದಿಗೆ ಮುಂಬಯಿ ನ್ಯಾಯಾಲಯವು ಮಂಗಳವಾರ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ವಿಶೇಷ ನ್ಯಾಯಾಧೀಶ ಎ.ಟಿ. ವಾಂಖೇಡೆ ಅವರು ಈ ಆರು ಮಂದಿ ದೋಷಿಗಳಿಗೆ ತಲಾ 5 ಲಕ್ಷ ರೂ.ಗಳ ದಂಡ ಕೂಡ ವಿಧಿಸಿದ್ದಾರೆ. ಈ ಆರು ಮಂದಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 307 (ಕೊಲೆ ಯತ್ನ), 120 ಬಿ (ಕ್ರಿಮಿನಲ್‌ ಪಿತೂರಿ) ಮತ್ತು ಶಸ್ತ್ರಾಸ್ತ್ರ ಕಾಯಿದೆಯ ನಿಬಂಧನೆಗಳ ಹೊರತಾಗಿ ಮೋಕಾ ಕಾಯಿದೆಯ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

2012ರ ಅಕ್ಟೋಬರ್‌ನಲ್ಲಿ ಅಂಧೇರಿಯಲ್ಲಿ ದ್ವಿಚಕ್ರವಾಹನದಿಂದ ಬಂದ ಇಬ್ಬರು ದುಷ್ಕರ್ಮಿಗಳು ಶೆಟ್ಟಿ ಅವರ ಮೇಲೆ ನಾಲ್ಕು ಸುತ್ತಿನ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಶೆಟ್ಟಿ ಅವರ ಭುಜದ ಮೇಲೆ ಗಾಯಗಳಾಗಿದ್ದರೂ ಅವರು ಆಗ ಹತ್ತಿರದ ಪೊಲೀಸ್‌ ಠಾಣೆಗೆ ಕಾಲಿಡಲು ಯಶಸ್ವಿಯಾಗಿದ್ದರು. ಅನಂತರ ಅವರನ್ನು ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. 2014ರ ಜನವರಿಯಲ್ಲಿ ಮುಂಬಯಿ ಪೊಲೀಸರು ಈ ಪ್ರಕರಣದಲ್ಲಿ 1,332 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಅದರಲ್ಲಿ ಛೋಟಾ ರಾಜನ್‌ ಶೆಟ್ಟಿ ಅವರ ಮೇಲೆ ಗುಂಡು ಹಾರಿಸಲು ಆದೇಶಿಸಿರುವುದು ದೃಢಪಟ್ಟಿದೆ. ರಾಜನ್‌ ಸಹಚರ ಸತೀಶ್‌ ತಂಕಪ್ಪನ್‌ ಅಲಿಯಾಸ್‌ ಕಾಲಿಯಾ ಶೂಟಿಂಗ್‌ಗೆ ಸೂಚನೆಗಳನ್ನು ನೀಡಿದ್ದ ಎಂದು ಚಾರ್ಜ್‌ ಶೀಟ್‌ ಹೇಳಿದೆ.

ಪ್ರಕರಣದಲ್ಲಿ ರಾಜನ್‌ ಮತ್ತು ಕಾಲಿಯಾ ಮಾತ್ರವಲ್ಲದೆ, ಇತರರಾದ ಸೆಲ್ವನ್‌ ಚೆಲ್ಲಾಪ್ಪನ್‌, ದೀಪಕ್‌ ಉಪಾಧ್ಯಾಯ, ನಿತ್ಯಾನಂದ್‌ ನಾಯಕ್‌ ಮತ್ತು ತಲ್ವಿಂದರ್‌ ಸಿಂಗ್‌ ಅಲಿಯಾಸ್‌ ಸೋನುಗೆ ಜೈಲು ಶಿಕ್ಷೆಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ