ನೆಟ್ಟಿಗರ ಮನಗೆದ್ದ ಮಗುವಿನ “ಎವರ್‌ಗ್ರೀನ್ ಸ್ಟೈಲ್ ‘
Team Udayavani, May 28, 2022, 6:50 AM IST
ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ, ಆಸ್ಟ್ರೇಲಿಯಾದ ಕ್ರಿಸ್ಟಿನಾ ವರ್ಚರ್ ಹಾಗೂ ಬ್ಲೇಜ್ ಮುಚಾ ಎಂಬ ದಂಪತಿಗೆ ಜನಿಸಿದ್ದ ಮಗುವೊಂದು ಸದ್ಯಕ್ಕೆ ನೆಟ್ಟಿಗರ ಮೊಗದಲ್ಲಿ ನಸುನಗು ಮೂಡಿಸುತ್ತಿದೆ. ಆ ಮಗುವಿನ ಹೆಸರು ಆಯ್ಲಾ ಸಮ್ಮರ್ ಮುಚಾ. ಈ ಮಗುವಿಗೆ, ಬೈಲ್ಯಾಟರಲ್ ಮೈಕ್ರೋಸ್ಟೋಮಿಯಾ ಎಂಬ ನ್ಯೂನತೆಯಿದೆ.
ಈ ಪುಟಾಣಿಯಲ್ಲಿರುವ ನ್ಯೂನತೆಯು ವಿರಳಾತಿವಿರಳ ವ್ಯಕ್ತಿಗಳಲ್ಲಿ ಕಂಡುಬರುತ್ತದೆ ಹಾಗೂ ಇದು ಮುಖದ ಸೌಂದರ್ಯ, ಅಲ್ಲಿನ ಸ್ನಾಯುಗಳ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಯ್ಲಾ ಪ್ರಕರಣದಲ್ಲಿ ಈ ನ್ಯೂನತೆಯಿಂದ ಆಕೆಯ ಕೆನ್ನೆ, ತುಟಿಗಳ ಸ್ನಾಯುಗಳು ಬಿಗಿತಗೊಂಡು ಆಕೆ ಸದಾ ಮಂದಸ್ಮಿತಳಾಗಿ ಕಾಣುವಂತೆ ಮಾಡಿದೆ.
ಈಕೆಯ ಫೋಟೋಗಳು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ವೈದ್ಯರ ಪ್ರಕಾರ, ಈ ನ್ಯೂನತೆಯುಳ್ಳ ಪ್ರಕರಣಗಳು ಇಡೀ ವಿಶ್ವದಲ್ಲಿ ಕೇವಲ 14ರಷ್ಟಿವೆಯಂತೆ. ಆಸ್ಟ್ರೇಲಿಯಾದಲ್ಲಿ ಇದು ಮೊದಲನೇ ಪ್ರಕರಣ!
ಮಗು ಇನ್ನೂ ಭ್ರೂಣಾವಸ್ಥೆಯಲ್ಲಿದ್ದಾಗಲೇ ಬೈಲ್ಯಾಟರಲ್ ಮೈಕ್ರೋಸ್ಟೋಮಿಯಾ ನ್ಯೂನತೆ ಆರಂಭವಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ
ಒಂದೇ ದಿನ 45% ಏರಿಕೆ ಕಂಡ ಕೋವಿಡ್ ಪ್ರಕರಣಗಳ ಸಂಖ್ಯೆ; 17,073 ಹೊಸ ಪ್ರಕರಣಗಳು
ಜು. 1ರಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ: ರಾಜ್ಯದಲ್ಲೂ ಕಟ್ಟುನಿಟ್ಟಿನ ಜಾರಿಗೆ ಕ್ರಮ
ನೀರಲ್ಲೇ ನಿಂತು ಅಹವಾಲು ಆಲಿಕೆ: ಅಸ್ಸಾಂ ಸಿಲ್ಚಾರ್ನಲ್ಲಿ ಸಿಎಂ ಹಿಮಾಂತ ಪರಿಶೀಲನೆ
ರಾಜಸ್ಥಾನದ ಈ ಎರಡು ಸಮುದಾಯದ ಮದುವೆಗೆ ಡಿಜೆ, ಡೆಕೋರೇಷನ್ ಇಲ್ಲ! ಕಾರಣ ಇಷ್ಟೇ