ಬ್ರಿಟಿಷ್ ಕಾಲದ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟ ನಿರ್ಮಲಾ! ಕೆಂಪು ಬಟ್ಟೆಯಲ್ಲಿ ಬಜೆಟ್ ಪ್ರತಿ
Team Udayavani, Jul 5, 2019, 12:04 PM IST
ನವದೆಹಲಿ: ಪ್ರತಿ ಬಾರಿ ಬಜೆಟ್ ಮಂಡಿಸುವ ವೇಳೆ ಹಣಕಾಸು ಸಚಿವರು ಕೆಂಪು ಬಣ್ಣದ ಸೂಟ್ ಕೇಸ್ ನಲ್ಲಿ ಬಜೆಟ್ ಪ್ರತಿ ಕೊಂಡೊಯ್ಯುವ ಸಂಪ್ರದಾಯಕ್ಕೆ ಈ ಬಾರಿ ಚೊಚ್ಚಲ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ತಿಲಾಂಜಲಿ ಇಟ್ಟಿದ್ದಾರೆ!
ಕೇಂದ್ರ ಸರ್ಕಾರದ 2019-20ನೇ ಸಾಲಿನ ಬಜೆಟ್ ಪ್ರತಿಯನ್ನು ಸೂಟ್ ಕೇಸ್ ನಲ್ಲಿ ಈ ಬಾರಿ ನಿರ್ಮಲಾ ಸೀತಾರಾಮನ್ ತಂದಿಲ್ಲ ಎಂಬುದೇ ವಿಶೇಷತೆಯಾಗಿತ್ತು. ಬಜೆಟ್ ಪ್ರತಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಭಾರತೀಯ ಸಂಪ್ರದಾಯದಂತೆ ತಂದಿದ್ದರು. ಬಟ್ಟೆಯ ಮುಂಭಾಗದಲ್ಲಿ ರಾಷ್ಟ್ರ ಲಾಂಛನ ಹಾಕಲಾಗಿತ್ತು. ಇದು ಬಾಹಿ ಖಾತಾ(ಲೆಡ್ಜರ್ ಬುಕ್) ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
“ ಈ ಬಾರಿಯ ಬಜೆಟ್ ಪ್ರತಿಯನ್ನು ಸೂಟ್ ಕೇಸ್ ಬದಲು ಭಾರತೀಯ ಸಂಪ್ರದಾಯದಂತೆ ಬಾಯಿ ಖಾತೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತರಲಾಗಿದೆ ಎಂದು ಮುಖ್ಯ ವಿತ್ತ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ತಿಳಿಸಿದ್ದಾರೆ.
ಇದು ಭಾರತೀಯ ಸಂಪ್ರದಾಯ. ನಾವು ಪಾಶ್ಚಾತ್ಯ ಗುಲಾಮಗಿರಿ ಪದ್ಧತಿಯಿಂದ ಹೊರಬಂದಿದ್ದೇವೆ ಎಂಬುದ ಸಂಕೇತವಾಗಿದೆ. ಇದು ಬಜೆಟ್ ಅಲ್ಲ, ಲೆಡ್ಜರ್ ಎಂದು ವಿಶ್ಲೇಷಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್