ರೂಪಾಯಿ ಬಗ್ಗೆ ಫೇಕ್ ಸುದ್ದಿ: ಸುರ್ಜೇವಾಲಾ ಎಡವಟ್ಟು
Team Udayavani, Sep 7, 2019, 5:00 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಎಡವಟ್ಟು ಮಾಡಿಕೊಂಡಿದ್ದಾರೆ. ಮೋದಿ ಸರ್ಕಾರದಡಿ ಭಾರತದ ರೂಪಾಯಿ ಮೌಲ್ಯವು ಬಾಂಗ್ಲಾದೇಶದ ಕರೆನ್ಸಿಯಾದ ಟಾಕಾಗಿಂತಲೂ ಕೆಳಗಿಳಿದಿದೆ ಎಂದು ಸುರ್ಜೇವಾಲಾ ಶುಕ್ರವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು. ಅದರಲ್ಲಿ 1 ಬಾಂಗ್ಲಾದೇಶದ ಟಾಕಾವು ಭಾರತದ 1.18 ರೂಪಾಯಿಗೆ ಸಮ ಎಂದು ಬರೆದಿದ್ದರು. ಆದರೆ, ವಾಸ್ತವದಲ್ಲಿ ರೂಪಾಯಿ ಮೌಲ್ಯವು ಬಾಂಗ್ಲಾದ ಕರೆನ್ಸಿಗಿಂತಲೂ ಮೇಲ್ಮಟ್ಟದಲ್ಲಿದ್ದು, 1 ರೂಪಾಯಿ ಎಂದರೆ 1.18 ಟಾಕಾ ಆಗುತ್ತದೆ. ಅವರ ಟ್ವೀಟ್ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ, ಕೊನೆಗೆ ಸುರ್ಜೇವಾಲಾ ಆ ಟ್ವೀಟ್ ಡಿಲೀಟ್ ಮಾಡಿದರು.