ಬ್ಯಾಂಕ್ ವಂಚನೆ ಪ್ರಕರಣ: ಇ.ಡಿ.ಯಿಂದ 415 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
Team Udayavani, Aug 3, 2022, 9:23 PM IST
ನವದೆಹಲಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳಿಗೆ 34 ಸಾವಿರ ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಂಜಯ ಛಾಬ್ರಿಯಾ ಮತ್ತು ಅವಿನಾಶ್ ಭೋಸ್ಲೆಗೆ ಸೇರಿದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಜಪ್ತಿ ಮಾಡಿದೆ.
ಈ ಪೈಕಿ ಬೆಂಗಳೂರಿನಲ್ಲಿ ಸಂಜಯ ಛಾಬ್ರಿಯಾ ಮಾಲೀಕತ್ವದ ರೇಡಿಯಸ್ ಡೆವಲಪರ್ಸ್ ಗೆ ಸೇರಿದ 115 ಕೋಟಿ ರೂ. ಮೌಲ್ಯದ ಜಮೀನು ಕೂಡ ಸೇರಿದಂತೆ. ಭೋಸ್ಲೆ ಮುಂಬೈನಲ್ಲಿ ಹೊಂದಿರುವ 102.8 ಕೋಟಿ ರೂ. ಮೌಲ್ಯದ ಡ್ಯುಪ್ಲೆಕ್ಸ್ ಫ್ಲಾಟ್, ಪುಣೆಯಲ್ಲಿ ಇರುವ 14.65 ಕೋಟಿ ರೂ. ಮೌಲ್ಯದ ಜಮೀನು, ನಾಗ್ಪುರದಲ್ಲಿ ಹೊಂದಿರುವ 15.52 ಕೋಟಿ ರೂ. ಮೌಲ್ಯದ ಜಮೀನನ್ನೂ ಇ.ಡಿ. ವಶಪಡಿಸಿಕೊಂಡಿದೆ.
ಕೆಲದಿನಗಳ ಹಿಂದೆ ಇ.ಡಿ. ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಅನ್ನು ಛಾಬ್ರಿಯಾ ನಿವಾಸದಿಂದ ವಶಪಡಿಸಿಕೊಂಡಿತ್ತು. ಅದರ ಬೆನ್ನಲ್ಲಿಯೇ ಇ.ಡಿ. ಈ ಕ್ರಮ ಕೈಗೊಂಡಿದೆ.