ರೇಪ್ ಕೇಸ್ ಹಿಂಪಡೆಯದ Bar dancer, ಗುಂಡಿಕ್ಕಿ ಕೊಂದ Bouncer
Team Udayavani, Jan 19, 2019, 6:53 AM IST
ಗುರುಗ್ರಾಮ : ತನ್ನ ವಿರುದ್ಧದ ರೇಪ್ ಕೇಸನ್ನು ಹಿಂದೆಗೆದುಕೊಳ್ಳಲು ನಿರಾಕರಿಸಿದ 22ರ ಹರೆಯದ ಯುವತಿಯನ್ನು ಡ್ಯಾನ್ಸಿಂಗ್ ಬಾರ್ ಬೌನ್ಸರ್ ಸಂದೀಪ್ ಕುಮಾರ್ ಎಂಬಾತನು ಗುಂಡಿಕ್ಕಿ ಕೊಂದಿರುವುದಾಗಿ ಗುರುಗ್ರಾಮದ ಎಸಿಪಿ ಶಂಶೇರ್ ಸಿಂಗ್ ತಿಳಿಸಿದ್ದಾರೆ.
ಮಹಿಳೆಯ ಶವವು ಇಂದು ನಸುಕಿನ 6.30ರ ವೇಳೆಗೆ ಡಿಎಲ್ಎಫ್ ಮೊದಲ ಹಂತದ ಖುಷ್ಬೂ ಚೌಕ್ ಸಮಿಪ ಪತ್ತೆಯಾಗಿದೆ. ಹತ್ಯೆಗೀಡಾದ ಮಹಿಳೆಯು ವೃತ್ತಿಯಲ್ಲಿ ಬಾರ್ ಡ್ಯಾನ್ಸರ್.
ನೈಟ್ ಕ್ಲಬ್ನಲ್ಲಿ ಕೆಲಸ ಮಾಡಿಕೊಂಡಿದ್ದಾಗ ಮಹಿಳೆಯು ಸಂದೀಪ್ ಕುಮಾರ್ ಜತೆಗೆ ಸ್ನೇಹ ಬೆಳೆಸಿಕೊಂಡಿದ್ದಳು. ಈ ಸಲುಗೆಯಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. 2017ರ ಮಾರ್ಚ್ನಲ್ಲಿ ಆಕೆ ಪೊಲೀಸರಿಗೆ ಆತನ ವಿರುದ್ಧ ಆತ್ಯಾಚಾರದ ದೂರನ್ನು ನೀಡಿದ್ದಳು. ಗುರುಗ್ರಾಮ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಕೋರ್ಟ್ ಅನಂತರ ಆತನಿಗೆ ಜಾಮೀನು ಮಂಜೂರು ಮಾಡಿತ್ತು.
ಮಹಿಳೆಯು ಕೋರ್ಟಿನಲ್ಲಿ ತನ್ನ ಹೇಳಿಕೆ ದಾಖಲಿಸಲು ಕೆಲವೇ ತಾಸುಗಳ ಇದ್ದಾಗ ಸಂದೀಪ್ ಕುಮಾರ್ ಆಕೆಯನ್ನು ಕೊಂದಿದ್ದಾನೆ ಎನ್ನಲಾಗಿದೆ.
ಮೃತ ಮಹಿಳೆಯ ತಾಯಿ ಹೇಳಿರುವ ಪ್ರಕಾರ ಸಂದೀಪ್ ಕುಮಾರ್ ಮಹಿಳೆಯನ್ನು ಮನೆಯಿಂದ ಅಪಹರಿಸಿ ಒಯ್ದು ಕೊಂದಿದ್ದಾನೆ. ಸಂದೀಪ್ ಆಕೆಯ ಮೇಲೆ ನಾಲ್ಕು ಗುಂಡುಗಳನ್ನು ಎಸೆದಿದ್ದಾನೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ