ಅಮರನಾಥ ಯಾತ್ರಿಕರಿಗೆ ಬಾರ್‌ಕೋಡ್ ಚೀಟಿ!
Team Udayavani, May 30, 2019, 6:00 AM IST
ಹೊಸದಿಲ್ಲಿ: ಈ ಬಾರಿ ಅಮರನಾಥ ಯಾತ್ರಿಕರಿಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಯಾತ್ರಿಕರು ಎಷ್ಟು ಸಂಖ್ಯೆಯ ಲ್ಲಿದ್ದಾರೆ ಮತ್ತು ಅವರ ವೈಯಕ್ತಿಕ ವಿವರಗಳನ್ನು ತಿಳಿದು ಕೊಳ್ಳಲು ಬಾರ್‌ಕೋಡ್‌ಗಳನ್ನು ಹೊಂದಿರುವ ಸ್ಲಿಪ್ ನೀಡಲು ನಿರ್ಧರಿಸಲಾಗಿದೆ. ಆರ್‌ಎಫ್ಐಡಿ ಟ್ಯಾಗ್‌ಗಳನ್ನು ವಾಹನಕ್ಕೆ ಅಳವಡಿಸಲೂ ನಿರ್ಧರಿಸಲಾಗಿದೆ. ಅಲ್ಲದೆ ಅಮರನಾಥ ಯಾತ್ರಿಕರ ಸುರಕ್ಷತೆಗಾಗಿ 40 ಸಾವಿರ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. 48 ದಿನಗಳ ಯಾತ್ರೆಯು ಜುಲೈ 1 ರಿಂದ ಆರಂಭವಾಗಿ, ಆಗಸ್ಟ್ 15 ರಂದು ಮುಗಿಯಲಿದೆ. ಕಳೆದ ವರ್ಷವೂ ವಾಹನಗಳಿಗೆ ಆರ್‌ಎಫ್ಐಡಿ ಟ್ಯಾಗ್‌ಗಳನ್ನು ಅಳವಡಿಸ ಲಾಗಿತ್ತು. 2017 ರಲ್ಲಿ ಅಮರನಾಥ ಯಾತ್ರಿಕರ ಬಸ್ ಮೇಲೆ ಉಗ್ರರು ನಡೆಸಿದ್ದ ದಾಳಿಯಿಂದಾಗಿ ಎಂಟು ಯಾತ್ರಿಕರು ಸಾವನ್ನಪ್ಪಿದ್ದರು.