ಇರಾಕ್‌ನಲ್ಲಿ 135 ಕೆಜಿ ತೂಕದ ಐಸಿಸ್‌ ಉಗ್ರ ಅಂದರ್‌

Team Udayavani, Jan 18, 2020, 7:36 AM IST

ಬಾಗ್ಧಾದ್‌: ಇರಾಕ್‌ನಲ್ಲಿ ಅಮೆರಿಕ ಮತ್ತು ಆ ದೇಶದ ಸೈನಿಕರಿಗೆ ಐಸಿಸ್‌ ಉಗ್ರರನ್ನು ಎದುರಿಸುವುದೇ ಸವಾಲು. ಅಂಥ ಕ್ಷಣಗಳ ನಡುವೆಯೂ ಜನಾಂಗೀಯ ಕಲಹ, ಅತ್ಯಾಚಾರಗಳನ್ನು ಸಮರ್ಥಿಸಿದ ಶಿಫಾ ಅಲ್‌-ನಿಮಾ ಎಂಬ ಹೆಸರಿನ ಐಸಿಸ್‌ ಉಗ್ರನನ್ನು ಇರಾಕ್‌ನ ಸ್ವಾತ್‌ ಪಡೆ ಬಂಧಿಸಿದೆ.

ಆತನ ಬಂಧನಕ್ಕಿಂತ ತೂಕವೇ ವಿಶೇಷವಾದದ್ದು. ಆತ ಬರೋಬ್ಬರಿ 135 ಕೆಜಿಗಳಿಗಿಂತ ಅಧಿಕ ತೂಗುತ್ತಿದ್ದ. ಆತನನ್ನು ಕಾರಾಗೃಹಕ್ಕೆ ಕರೆದೊಯ್ಯಲು ದೊಡ್ಡ ಪ್ರಮಾಣದ ಟ್ರಕ್‌ ಅನ್ನೇ ತರಿಸಲಾಗಿತ್ತು ಎನ್ನುವುದೇ ಪ್ರಧಾನ ಅಂಶ. ಗುರುವಾರ ಈತನನ್ನು ಬಂಧಿಸಲಾಗಿದೆ ಎಂದು ಬ್ರಿಟನ್‌ನ ಹೋರಾಟಗಾರ ಮಾಜಿದ್‌ ನವಾಜ್‌ ಹೇಳಿದ್ದಾರೆ. ಐಸಿಸ್‌ಗೆ ಇದು ಅತಿದೊಡ್ಡ ಹಿನ್ನಡೆ ಎಂದೂ ಹೇಳಿದ್ದಾರೆ.

ಇರಾಕ್‌ ಪೊಲೀಸರ ಪ್ರಕಾರ, ಹಲವು ಫ‌ತ್ವಾ ಹೊರಡಿಸಿದ, ದಾಳಿಗಳಿಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿ ಆತ ಬೇಕಾದವನಾಗಿದ್ದ. ಆತನನ್ನು ಎತ್ತಿ ಕೊಂಡು ಟ್ರಕ್‌ಗೆ ಹಾಕಿರುವ ಫೋಟೋಗಳು ಈಗ ವೈರಲ್‌ ಆಗಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ