ಟ್ರಾಫಿಕ್‌ಗೆ ವಿಶ್ವದಲ್ಲಿ ಬೆಂಗ್ಳೂರೇ ನಂ.1

Team Udayavani, Jan 30, 2020, 3:07 AM IST

dattannege

ನವದೆಹಲಿ: ಉದ್ಯಾನ ನಗರಿ, ಐಟಿ ಹಬ್‌ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ವಿಶ್ವ ದಲ್ಲೇ ಅತಿ ಹೆಚ್ಚು ಟ್ರಾಫಿಕ್‌ ಜಾಮ್‌ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಮುಂಚೂಣಿ ವಾಹನ ಯಾನ ಸಂಸ್ಥೆಯಾದ ಟೋಮ್‌ ಟೋಮ್‌, ಟ್ರಾಫಿಕ್‌ ಜಾಮ್‌ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಿಶ್ವದ 57 ದೇಶಗಳ 416 ನಗರದಲ್ಲಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಭಾರತದ 4 ಪ್ರಮುಖ ನಗರಗಳು ಟಾಪ್‌ಟೆನ್‌ ಪಟ್ಟಿಯಲಿವೆ. ಟ್ರಾಫಿಕ್‌ ಜಾಮ್‌ನಿಂದ ಭಾರತ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದೆ ಎಂದು ಸಂಸ್ಥೆ ವಿಶ್ಲೇಷಿಸಿದೆ. ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದು, ಶೇ.71ರಷ್ಟು ಟ್ರಾಫಿಕ್‌ ಜಾಮ್‌ ಹೊಂದಿದೆ. ಇದು ವಿಶ್ವದಲ್ಲೇ ಅತಿ ಜನದಟ್ಟಣೆ ಕೂಡಿರುವ ನಗರವಾಗಿದೆ.

2019ರ ಆಗಸ್ಟ್‌ 20 ಮಂಗಳವಾರ ಅತಿ ಹೆಚ್ಚು ಟ್ರಾಫಿಕ್‌ ಜಾಮ್‌ನಿಂದ (ಶೇ.103)ಕೂಡಿರುವ ದಿನವಾಗಿದೆ. 2019ರ ಏಪ್ರಿಲ್‌ 6 ಶನಿವಾರ (ಶೇ.30) ಅತ್ಯುತ್ತಮ ದಿನವಾಗಿದೆ. ಶುಕ್ರವಾರ ರಾತ್ರಿ 8 ಗಂಟೆ ಬಳಿಕ ಸಂಚರಿಸಿದರೆ ವರ್ಷಕ್ಕೆ ಐದು ಗಂಟೆಯನ್ನು ಉಳಿಸಬಹುದಾಗಿದೆ. ಟ್ರಾಫಿಕ್‌ ಜಾಮ್‌ನಿಂದ ವರ್ಷಕ್ಕೆ ಸರಾಸರಿ 243 ಗಂಟೆಗಳು (10 ದಿನ, 3 ಗಂಟೆ) ವ್ಯರ್ಥವಾ ಗಲಿವೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ನಂತರ ಫಿಲಿಪ್ಪಿನ್ಸ್‌ ಮನಿಲಾ ನಗರ (ಶೇ. 71 ಟ್ರಾಫಿಕ್‌ ಜಾಮ್‌) 2ನೇ ಸ್ಥಾನದಲ್ಲಿದೆ. ಕೊಲಂಬಿಯಾದ ಬೊಗೊಟಾ ನಗರ (ಶೇ.68) 3ನೇ ಸ್ಥಾನದಲ್ಲಿದೆ. ಇನ್ನು ಭಾರತದ ಮುಂಬೈ (ಶೇ.65) 4ನೇ ಸ್ಥಾನ, ಪುಣೆ (ಶೇ.59) 5ನೇ ಸ್ಥಾನ ಹಾಗೂ ನವದೆಹಲಿ (ಶೇ.56) 8ನೇ ಸ್ಥಾನದಲ್ಲಿದೆ. ರಷ್ಯಾದ ಮಾಸ್ಕೋ, ಪೆರು ದೇಶದ ಲಿಮಾ, ಟರ್ಕಿಯ ಇಸ್ತಾನಬುಲ್‌ ಹಾಗೂ ಇಂಡೋನೇಷ್ಯಾದ ಜಕರ್ತಾ ಟಾಪ್‌ಟೆನ್‌ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ವಿಶೇಷ ಎಂದರೆ, ಭಾರತದ ಪ್ರಮುಖ ನಗರಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಇದ್ದರೂ ಮೆಟ್ರೋ ಸೇರಿದಂತೆ ರಸ್ತೆಗಳು ಅತ್ಯುತ್ತಮವಾಗಿವೆ. ಅತಿ ಹೆಚ್ಚು ಟ್ರಾಫಿಕ್‌ ಜಾಮ್‌, ಅತಿ ಕಡಿಮೆ ಟ್ರಾಫಿಕ್‌ ಜಾಮ್‌, ರಸ್ತೆಯಲ್ಲಿ ಚಾಲಕ ಎಷ್ಟು ಸಮಯ ಕಾಲ ಕಾಯುತ್ತಾನೆ, ರಸ್ತೆ ಸಂಪರ್ಕ ಜಾಲ ಮತ್ತಿತರ ಅಂಶಗಳನ್ನಿಟ್ಟುಕೊಂಡು ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ.

ಟಾಪ್‌ ಟೆನ್‌ ನಗರಗಳು, ಟ್ರಾಫಿಕ್‌ ಜಾಮ್‌ ಪ್ರಮಾಣ
1.ಬೆಂಗಳೂರು(ಭಾರತ)- ಶೇ.71
2.ಮನಿಲಾ(ಫಿಲಿಪ್ಪಿನ್‌)-ಶೇ.71
3.ಬೊಗೊಟಾ(ಕೊಲೊಂಬಿಯಾ)-ಶೇ.68
4.ಮುಂಬೈ (ಭಾರತ)-ಶೇ.65
5.ಪುಣೆ (ಭಾರತ)-ಶೇ.59
6.ಮಾಸ್ಕೋ (ರಷ್ಯಾ)-ಶೇ.59
7.ಲಿಮಾ (ಪೆರು)-ಶೇ.57
8.ನವದೆಹಲಿ(ಭಾರತ)-ಶೇ.56
9.ಇಸ್ತಾನಬುಲ್‌(ಟರ್ಕಿ)-ಶೇ.55
10.ಜಕಾರ್ತ (ಇಂಡೋನೇಷ್ಯಾ)-ಶೇ.53

ಟಾಪ್ ನ್ಯೂಸ್

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಸಚಿವ ಅಶೋಕ್

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಣಜಿ: ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಉತ್ತರ ಕನ್ನಡದ ವಿದ್ಯಾರ್ಥಿನಿ

ಪಣಜಿ: ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಉತ್ತರ ಕನ್ನಡದ ವಿದ್ಯಾರ್ಥಿನಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

RT-PCR ಪರೀಕ್ಷೆಯಿಂದ ಒಮಿಕ್ರಾನ್ ವೈರಸ್ ಪತ್ತೆ ಹಚ್ಚಲು ಸಾಧ್ಯವೇ? ತಜ್ಞರು ಹೇಳುವುದೇನು

RT-PCR ಪರೀಕ್ಷೆಯಿಂದ ಒಮಿಕ್ರಾನ್ ವೈರಸ್ ಪತ್ತೆ ಹಚ್ಚಲು ಸಾಧ್ಯವೇ? ತಜ್ಞರು ಹೇಳುವುದೇನು

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

MUST WATCH

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಹೊಸ ಸೇರ್ಪಡೆ

ಸರ್ಕಾರಿ ಬಸ್ಸ್

ಡ್ರೈವರ್‌ ಕಮ್‌ ಕಂಡಕ್ಟರ್‌ ಅಪಘಾತಕ್ಕೆ ಆಹ್ವಾನ ?

22constitution

ವಿಶ್ವದಲ್ಲೇ ನಮ್ಮ ಸಂವಿಧಾನ ಶ್ರೇಷ್ಠ

ಶ್ರೀರಂಗಪಟ್ಟಣ ದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣದಲ್ಲಿ ಅಪ್ಪು ಪುಣ್ಯ ಸ್ಮರಣೆ

hdk

2023ಕ್ಕೆ ಜೆಡಿಎಸ್‌ಗೆ ಅಧಿಕಾರ ಖಚಿತ: ಎಚ್ಡಿಕೆ

ಪಣಜಿ: ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಉತ್ತರ ಕನ್ನಡದ ವಿದ್ಯಾರ್ಥಿನಿ

ಪಣಜಿ: ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಉತ್ತರ ಕನ್ನಡದ ವಿದ್ಯಾರ್ಥಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.