ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

Team Udayavani, Nov 4, 2017, 10:06 AM IST

ಭೋಪಾಲ್‌: ಐಎಎಸ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 19ರ ಯುವತಿ ಮೇಲೆ ನಾಲ್ವರು ದುಷ್ಕರ್ಮಿಗಳು 3 ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಯುವತಿಯನ್ನು ಮರಕ್ಕೆ ಕಟ್ಟಿಹಾಕಿ, ಅತ್ಯಾಚಾರ ನಡೆಸಿದ ಈ ತಂಡ ಮಧ್ಯೆ ಟೀ ಮತ್ತು ಗುಟ್ಕಾ ತಿನ್ನಲು ವಿರಾಮ ಕೂಡ ಪಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. 

ಈ ಪ್ರಕರಣದ ಇನ್ನೂ ಅತ್ಯಂತ ಹೇಯ ಭಾಗವೆಂದರೆ, ಸ್ವತಃ ಅತ್ಯಾಚಾರ ಸಂತ್ರಸ್ತೆಯೇ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದರೂ ಪೊಲೀಸರು, “ಇದು ಸಿನಿಮಾ ಕಥೆಯಂತಿದೆ’ ಎಂದು ಹೇಳಿ ದೂರು ದಾಖಲಿಸಲು ನಿರಾಕರಿಸಿದ್ದಾರೆ. ಕಡೆಗೆ ಸಂತ್ರಸ್ತೆ ಮತ್ತು ಆಕೆಯ ಹೆತ್ತವರು ಇಬ್ಬರು ಆರೋಪಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ ಬಳಿಕವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಸರಕಾರವು ದೂರು ದಾಖಲಿಸಿ ಕೊಳ್ಳಲು ನಿರಾಕರಿಸಿದ ಸಬ್‌ ಇನ್ಸ್‌ಪೆಕ್ಟರನ್ನು ವರ್ಗಾವಣೆ ಮಾಡಿದ್ದು, ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿದೆ. ಯುವತಿಯು ಆರ್‌ಪಿಎಫ್ ಅಧಿಕಾರಿಯ ಪುತ್ರಿಯಾಗಿದ್ದು, ಐಎಎಸ್‌ ಪರೀಕ್ಷೆಗೆ ತರಬೇತಿಗಾಗಿ ಪ್ರತಿದಿನ ಹಬೀಬ್‌ಗಂಜ್‌ ರೈಲು ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಳು. ನಿಲ್ದಾಣದಿಂದಲೇ ಎಳೆದೊಯ್ದ ದುಷ್ಕರ್ಮಿಗಳು, ಈ ಕೃತ್ಯ ಎಸಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ