ಸಲ್ಮಾನ್‌ ಖಾನ್‌ ಕೊಲೆಗೆ ಬಿಡ್‌:ಬಿಷ್ಣೋಯಿ ಗ್ಯಾಂಗ್‌ ಸದಸ್ಯ ಅರೆಸ್ಟ್

Team Udayavani, Jun 10, 2018, 10:50 AM IST

ಹೈದರಾಬಾದ್‌: ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ರೂಪಿಸಿದ್ದು ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನೊಬ್ಬನನ್ನು  ಬಂಧಿಸಲಾಗಿದೆ.

ಬಂಧಿತ ಸಂಪತ್‌ ನೆಹ್ರಾ ಎಂಬಾತನಾಗಿದ್ದು ಆತನನ್ನು ಜೂನ್‌ 6 ರಂದೇ ವಶಕ್ಕೆ ಪಡೆದಿದ್ದು, ಹರ್ಯಾಣಕ್ಕೆ ವಿಶೇಷ ಪೊಲೀಸ್‌ ಪಡೆಗಳು ಕರೆತರುತ್ತಿರುವ ಬಗ್ಗೆ ತಿಳಿದು ಬಂದಿದೆ.  

ಕೃಷ್ಣ ಮೃಗ ಬೇಟೆಯಾಡಿದ ಕಾರಣಕ್ಕಾಗಿ ಹತ್ಯೆಗೆ ಸಂಚು ಮಾಡಲಾಗಿದ್ದು , ಸಲ್ಮಾನ್‌ ನಿವಾಸದ ಬಳಿ ಅಭಿಮಾನಿಯ ಸೋಗಿನಲ್ಲಿ  ತೆರಳಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಲಾರೆನ್ಸ್‌ ಬಿಷ್ಣೋಯಿ ಜನವರಿ ತಿಂಗಳಿನಲ್ಲಿ ಸಲ್ಮಾನ್‌ ಖಾನ್‌ರನ್ನು ಹತ್ಯೆಗೈಯುವುದಾಗಿ ಘೋಷಿಸಿದ್ದ  ಆಬಳಿಕ ಸಲ್ಮಾನ್‌ ಖಾನ್‌ ಶೂಟಿಂಗ್‌ ನಿರತರಾಗಿರುವ ಸ್ಥಳಗಳಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿತ್ತು. 

1998ರ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್‌ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ