ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ


Team Udayavani, Oct 26, 2020, 11:05 PM IST

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಹೊಸದಿಲ್ಲಿ/ಪಾಟ್ನಾ: ಹದಿನೈದು ವರ್ಷಗಳಿಂದ ಬಿಜೆಪಿ- ಜೆಡಿಯು ನೇತೃತ್ವದ ಸರಕಾರ ಬಿಹಾರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮೈತ್ರಿಕೂಟವನ್ನು ಗೆಲ್ಲಿಸಿ ಅಧಿಕಾರದಲ್ಲಿ ಮುಂದುವರಿ ಸಬೇಕು ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮನವಿ ಮಾಡಿದ್ದಾರೆ.

ಬಿಹಾರದ ಸಕ್ರಾ, ಮಹುವಾ, ಮಹಾ°ರ್‌ ಮತ್ತು ಕಂಟಿಗಳಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ವಿಪಕ್ಷ ನಾಯಕ ತೇಜಸ್ವಿ ಯಾದವ್‌ ಅವರ ಹೆಸರು ಪ್ರಸ್ತಾಪ ಮಾಡದೆ ಟೀಕಿಸಿದ ಮುಖ್ಯಮಂತ್ರಿ ಕೆಲವು ನಾಯಕರು ತಮ್ಮನ್ನು ಟೀಕಿಸಿ ಬರಿದೆ ಪ್ರಚಾರ ಪಡೆಯಲು ಮುಂದಾಗುತ್ತಿದ್ದಾರೆ. ಅದನ್ನು ಅವರು ಮುಂದುವರಿಸಲಿ. ತಮಗೆ ಅಂಥ ಪ್ರಚಾರ ಅಗತ್ಯವಿಲ್ಲ ಎಂದರು.

“28ರಿಂದ ಮೊದಲ ಹಂತದ ಮತದಾನ ಶುರುವಾ ಗಲಿದೆ. ಈ ಸಂದರ್ಭದಲ್ಲಿ 15 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಮುಂದುವ ರಿ ಸಲು ನೀವು ಮತ ಹಾಕುವಿರಿ ಎಂಬ ವಿಶ್ವಾಸವಿದೆ. ಹಲವು ಯೋಜನೆಗಳು ರಾಜ್ಯದ ಜನರ ಅಭಿವೃದ್ಧಿಗಾಗಿ ಜಾರಿಯಾಗಲಿವೆ’ ಎಂದರು.

“ನಮ್ಮ ಸರಕಾರ ಮೊದಲ ಬಾರಿಗೆ ಮಹಿಳೆಯರಿಗೆ ಮೀಸಲು ನೀಡುವ ವ್ಯವಸ್ಥೆ ಜಾರಿಗೆ ತಂದಿತು. ವಿದ್ಯಾರ್ಥಿನಿ ಯರಿಗೆ ಸೈಕಲ್‌ ವಿತರಿಸುವ ಯೋಜನೆ ಅನುಷ್ಠಾನಗೊಳಿಸಿದ್ದು ನಾವು. ಸಾವಿರಾರು ಶಾಲೆಗಳನ್ನು ನಿರ್ಮಿಸಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಸುಧಾರಣೆಗಳಾಗಿವೆ’ ಎಂದರು. ಇದೇ ವೇಳೆ ಸಕ್ರಾ ಎಂಬಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿಎಂ ಅವರತ್ತ ಕೆಲ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದಾರೆ. ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಚಾರ ಮುಕ್ತಾಯ: ಅ.28ರಂದು ಬಿಹಾರ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ. 71 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಪ್ರಚಾರ ಕಾರ್ಯ ಮುಕ್ತಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಪ್ರಮುಖರು ಪ್ರಚಾರ ನಡೆಸಿದ್ದಾರೆ.

2 ಕಡೆ ಇಂದು ರಾಹುಲ್‌ ಪ್ರಚಾರ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅ.28ರಂದು ವಾಲ್ಮೀಕಿನಗರ ಮತ್ತು ಕುಶೇಶ್ವರ್‌ ಆಸ್ಥಾನ್‌ ಎಂಬಲ್ಲಿ ಪ್ರಚಾರ ನಡೆಸಲಿದ್ದಾರೆ. ವಾಲ್ಮೀಕಿನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆ ನ.7, ವಿಧಾನಸಭೆ ಚುನಾವಣೆ ನ.3ರಂದು ನಡೆಯಲಿದೆ.

ಹೈಕೋರ್ಟ್‌ ಆದೇಶಕ್ಕೆ ತಡೆ: ನ.3ರಂದು ಮಧ್ಯಪ್ರದೇಶ ದಲ್ಲಿ ನಡೆಯಲಿರುವ ವಿಧಾನಸಭೆ ಉಪ ಚುನಾವಣೆಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ವರ್ಚುವಲ್‌ ಪ್ರಚಾರ ನಡೆಸಬೇಕು ಎಂಬ ಮಧ್ಯಪ್ರದೇಶ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾ.ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ಪೀಠ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಚುನಾವಣ ಆಯೋಗಕ್ಕೆ ಸೂಚನೆ ನೀಡಿತು. ಅ.20 ಮತ್ತು 23ರಂದು ಮಧ್ಯಪ್ರದೇಶ ನೀಡಿದ್ದ ಆದೇಶದಲ್ಲಿನ ಅಂಶಗಳನ್ನು ಪರಿಶೀಲಿಸುವಂತೆಯೂ ನ್ಯಾಯಪೀಠ ಆಯೋಗಕ್ಕೆ ಸೂಚಿಸಿದೆ.

ಪಾಲನೆಯಾಗದ ನಿಯಮ: ಕೊರೊನಾ ಸೋಂಕಿನ ನಡುವೆಯೇ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಹಲವು ನಿಯಮಗಳನ್ನು ಚುನಾವಣ ಆಯೋಗ ಸೂಚಿಸಿತ್ತು. ಎಲ್ಲಾ ಪಕ್ಷಗಳ ಪ್ರಚಾರ ಕಾರ್ಯಕ್ರಮದಲ್ಲಿ ಅವುಗಳ ಕನಿಷ್ಠ ಪಾಲನೆ ಕಂಡುಬರುತ್ತಿದೆ.

ಬಿಹಾರ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ, ಚುನಾವಣ ಉಸ್ತುವಾರಿ ದೇವೇಂದ್ರ ಫ‌ಡ್ನವಿಸ್‌, ಛಪ್ರಾ ಸಂಸದ ರಾಜೀವ್‌ ಪ್ರತಾಪ್‌ ರೂಡಿ ಸೇರಿದಂತೆ ಪ್ರಮುಖರಿಗೆ ಸೋಂಕು ದೃಢಪಟ್ಟು ಕ್ವಾರಂಟೈನ್‌ನಲ್ಲಿ ಇದ್ದಾರೆ.

ಈ ಅಂಶಗಳು ಯಾವ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಎಚ್ಚರಿಕೆಯ ಸಂದೇಶವನ್ನೇ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಚುನಾವಣ ಪ್ರಚಾರ ಕಾರ್ಯಕ್ರಮದಲ್ಲಿ ಮಾತ್ರ ಸೋಂಕು ತಡೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಸೋಂಕು ತಡೆ ನಿಯಮ ಪಾಲನೆ ನಿಟ್ಟಿನಲ್ಲಿ ಅ.21ರಂದು ಬಿಹಾರ ರಾಜ್ಯ ಮುಖ್ಯ ಚುನಾವಣಧಿಕಾರಿಗೆ ಕೇಂದ್ರ ಚುನಾವಣ ಆಯೋಗ ನಿರ್ದೇಶನ ನೀಡಿತ್ತು.

ಟಾಪ್ ನ್ಯೂಸ್

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

death of soldeir

ನಿಂತಿದ್ದ ಕಾರಲ್ಲಿ ಮಾಜಿ ಸೈನಿಕ ಶವಪತ್ತೆ!

ಬೆಳಗಾವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

ಬೆಳಗಾವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

Untitled-1

ಸಿದ್ದರಾಮಯ್ಯ – ಜಿ.ಟಿ ದೇವೇಗೌಡ ದೋಸ್ತಿ ಹಾಸ್ಯಾಸ್ಪದ: ಸಂಸದ ವಿ. ಶ್ರೀನಿವಾಸಪ್ರಸಾದ್

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

ಹೊಸ ಸೇರ್ಪಡೆ

19protection

ಬೇಡಿಕೆ ಈಡೇರಿಕೆಗೆ ಗುತ್ತಿಗೆದಾರರ ಆಗ್ರಹ

18election

ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಮಲ್ಲಿಕಾರ್ಜುನ ಲೋಣಿ ಮನವಿ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

17tourist

ಗೌರವಧನಕ್ಕೆ ಆಗ್ರಹಿಸಿ ಪ್ರವಾಸಿ ಗೈಡ್‌ಗಳಿಂದ ಪತ್ರ ಚಳವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.