ಬಿಹಾರ ನಿತೀಶ್‌ ಸಂಪುಟ ವಿಸ್ತರಣೆ ; 8 ಜೆಡಿಯು ನಾಯಕರಿಗೆ ಅವಕಾಶ

ಬಿಜೆಪಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ನಿತೀಶ್‌

Team Udayavani, Jun 2, 2019, 3:16 PM IST

ಪಾಟ್ನಾ: ಬಿಹಾರದ ಎನ್‌ಡಿಎ ಸರ್ಕಾರದ ಸಂಪುಟ ವಿಸ್ತರಣೆ ಭಾನುವಾರ ನಡೆದಿದ್ದು, 8 ಮಂದಿ ಜೆಡಿಯು ನಾಯಕರು ನಿತೀಶ್‌ ಕುಮಾರ್‌ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಅಶೋಕ್‌ ಚೌಧರಿ, ಶ್ಯಾಮ್‌ ರಾಜಾಕ್‌, ಎಲ್‌ ಪ್ರಸಾದ್‌ , ಭೀಮಾ ಭಾರತಿ , ರಾಮ್‌ ಸೇವಕ್‌ ಸಿಂಗ್‌, ಸಂಜಯ್‌ ಝಾ, ನೀರಜ್‌ ಕುಮಾರ್‌ ಮತ್ತು ನರೇಂದ್ರ ನಾರಾಯಣ ಯಾದವ್‌ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶ್ಯಾಮ್‌ ರಜಾಕ್‌ ಅವರು ಆರ್‌ಜೆಡಿ ತೊರೆದು ವರ್ಷದ ಹಿಂದೆ ಜೆಡಿಯು ಸೇರ್ಪಡೆಯಾಗಿದ್ದರು.

ಅಶೋಕ್‌ ಚೌಧರಿ ಅವರು ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್‌-ಆರ್‌ಜೆಡಿ-ಜೆಡಿಯು ಸರ್ಕಾರವಿದ್ದಾಗ ಸಚಿವರಾಗಿದ್ದರು. ಆ ಬಳಿಕ ಜೆಡಿಯು ಸೇರ್ಪಡೆಯಾಗಿದ್ದರು.

ಸಂಪುಟ ವಿಸ್ತರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್‌ , ಜೆಡಿಯು ಕೋಟಾದಲ್ಲಿ ಖಾಲಿ ಇದ್ದ ಸಚಿವ ಸ್ಥಾನಗಳನ್ನು ತುಂಬಿಸಿದ್ದೇವೆ. ಯಾವುದೇ ಗೊಂದಲವಿಲ್ಲ. ಬಿಜೆಪಿ ಬಿಹಾರದಲ್ಲಿ ಸರ್ಕಾರದ ಭಾಗವಾಗಿ ಇರಲಿದೆಎಂದರು.

ಮೋದಿ ಸಂಪುಟದಲ್ಲಿ ಎನ್‌ಡಿಎ ಮಿತ್ರಪಕ್ಷವಾದ ಹೊರತಾಗಿಯೂ ಜೆಡಿಯು ಸಂಸದರು ಯಾರೂ ಸಚಿವ ಸ್ಥಾನ ಪಡೆದಿರಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ