ಬಿಹಾರದಲ್ಲಿ ಭೀಕರ ನೆರೆ:56 ಬಲಿ;70 ಲಕ್ಷ ಜನ ಸಂತ್ರಸ್ತ

Team Udayavani, Aug 16, 2017, 9:22 AM IST

ಪಟ್ನಾ : ಬಿಹಾರದ 13 ಜಿಲ್ಲೆಗಳಲ್ಲಿ ಭೀಕರ ನೆರೆ ಕಾಣಿಸಿಕೊಂಡಿದ್ದು,56 ಮಂದಿ ಬಲಿಯಾಗಿದ್ದು 69.81 ಲಕ್ಷ ಜನ ಸಂತ್ರಸ್ತರಾಗಿದ್ದಾರೆ.

ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ನೆರೆಯಿಂದಾ ನೂರಾರು ಮನೆಗಳು ಕೊಚ್ಚಿ ಹೋಗಿದ್ದು, ಹಲವು ಕಟ್ಟಡಗಳು ಹಾನಿಗೊಂಡಿವೆ. ನೂರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಹಲವೆಡೆ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. 

ಪಶ್ಚಿಮ ಚಂಪಾರಣ್‌, ಕಿಶನ್‌ಗಂಜ್‌,ಸೀತಾಮರಿ, ಮಾಧೇಪುರ್‌, ಪೂರ್ವ ಚಂಪಾರಣ್‌, ದರ್ಭಂಗಾ, ಮಧುಬನಿ, ಮುಜಾಫ‌ರ್‌ನಗರ ಮತ್ತು ಶೋಹಾರ್‌ ಜಿಲ್ಲೆಗಳಲ್ಲಿ ಹಲವಾರು ಪ್ರದೇಶ ಜಲಾವೃತವಾಗಿದೆ. 

ರಕ್ಷಣಾ ಕಾರ್ಯಕ್ಕೆ ವಾಯುಪಡೆ ಮತ್ತು ಎನ್‌ಡಿಆರ್‌ಎಫ್ ಪಡೆಗಳನ್ನು ಬಳಸಿಕೊಳ್ಳಲಾಗಿದೆ. ಹಲವೆಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. 

ನೆರೆಯೆ ರಾಷ್ಟ್ರ ನೇಪಾಲದಲ್ಲೂ ಭೀಕರ ನೆರೆ ಕಾಣಿಸಿಕೊಂಡಿದ್ದು 115 ಮಂದಿ ಬಲಿಯಾಗಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ