ಬಿಹಾರ ಸರಕಾರದ ಕೈಪಿಡಿಯಲ್ಲಿ ಪಾಕ್ ಧ್ವಜ!
Team Udayavani, May 6, 2018, 6:00 AM IST
ಪಾಟ್ನಾ: ಬಿಹಾರದ ಜಮುಯಿ ಜಿಲ್ಲಾಡಳಿತವು ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರಕಟಿಸಿದ ಕೈಪಿಡಿಯ ಮುಖಪುಟದಲ್ಲಿ ಪಾಕಿಸ್ತಾನದ ಬಾವುಟ ಹಿಡಿದ ಪಾಕ್ ಬಾಲಕಿಯ ಚಿತ್ರವನ್ನು ಮುದ್ರಿಸಿರುವುದು ಇದೀಗ ವಿವಾದಕ್ಕೀಡಾಗಿದೆ. ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣದ ರಾಯಭಾರಿ ಬಾಲಕಿಯ ಚಿತ್ರವನ್ನು “ಸ್ವಚ್ಛ ಜಮುಯಿ ಸ್ವಸ್ಥ ಜಮುಯಿ’ ಎಂಬ ಕೈಪಿಡಿಯಲ್ಲಿ ಮುದ್ರಿಸಿ, ಅದನ್ನು ಅಂಗನವಾಡಿ, ಶಾಲೆಗಳಿಗೆ ಹಂಚಲಾಗಿದೆ.
ಒಟ್ಟು 5,000 ಕೈಪಿಡಿಗಳನ್ನು ಮುದ್ರಿಸಲಾಗಿದೆ. ಜಿಲ್ಲಾಡಳಿತ ದ ಪರವಾನಗಿ ಪದೇ ಮುದ್ರಿಸಲಾಗಿದೆ ಎಂದು ಮುದ್ರಣಾಲಯ ಹೇಳಿದೆ. ಸರಕಾರ ತನಿಖೆಗೆ ಆದೇಶಿಸಿದೆ.