ತಂದೆಯನ್ನು ಮರಕ್ಕೆ ಕಟ್ಟಿಹಾಕಿ ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕರು!
Team Udayavani, Feb 7, 2019, 1:35 PM IST
ಬಿಹಾರ್/ಕಿಶಾನ್ ಗಂಜ್:ತಂದೆಯನ್ನು ಮರಕ್ಕೆ ಕಟ್ಟಿ ಹಾಕಿ ಕಾಮುಕರು ಮಗಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಕಿಶಾನ್ ಗಂಜ್ ಪ್ರದೇಶದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿರುವುದಾಗಿ ವರದಿ ತಿಳಿಸಿದೆ.
ಫೆಬ್ರುವರಿ 4ರಂದು ರಾತ್ರಿ ಆರು ಮಂದಿ ಬಂದು ಮನೆಯ ಬಾಗಿಲನ್ನು ಬಡಿದಿದ್ದರು. ಬಳಿಕ ತಮಗೆ ಕುಡಿಯಲು ಸ್ವಲ್ಪ ನೀರು ಬೇಕೆಂದು ಕೇಳಿ ಬಲವಂತವಾಗಿ ಮನೆಯೊಳಗೆ ನುಗ್ಗಿದ್ದರು. ಅಲ್ಲದೇ ತಂದೆ ಮತ್ತು ಮಗಳನ್ನು ದುಷ್ಕರ್ಮಿಗಳು ಮನೆಯಿಂದ ಹೊರಗೆ ಎಳೆದು ತಂದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಆಶೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ತಂದೆಗೆ ಹಿಗ್ಗಾಮುಗ್ಗಾ ಹೊಡೆದು ಮರಕ್ಕೆ ಕಟ್ಟಿಹಾಕಿದ್ದರು. ತದನಂತರ ತಂದೆಯ ಎದುರೇ ಆರು ಮಂದಿ ಮಗಳ ಮೇಲೆ ಅತ್ಯಾಚಾರ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.