ಸಣ್ಣ ಬಟ್ಟೆ ತೊಡುವಂತೆ ಒತ್ತಾಯ; ವಿರೋಧಿಸಿದಕ್ಕೆ ತ್ರಿಪಲ್ ತಲಾಖ್!
Team Udayavani, Oct 13, 2019, 11:28 AM IST
ಹೊಸದಿಲ್ಲಿ: ಆಧುನಿಕ ರೀತಿಯ ಬಟ್ಟೆಗಳನ್ನು ತೊಡುವಂತೆ ಮತ್ತು ಮದ್ಯ ಸೇವಿಸುವಂತೆ ಒತ್ತಾಯಿಸಿದ ಪತಿಯ ನಿರ್ಧಾರವನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯೋರ್ವರಿಗೆ ತ್ರಿವಳಿ ತಲಾಖ್ ನೀಡಿದ ಪ್ರಕರಣ ಬಿಹಾರದಲ್ಲಿ ವರದಿಯಾಗಿದೆ.
ನೂರ್ ಫಾತಿಮಾ ಎಂಬ ಮಹಿಳೆಗೆ ಆಕೆಯ ಪತಿ ಇಮ್ರಾನ್ ಮುಸ್ತಾಫಾ ತ್ರಿವಳಿ ತಲಾಖ್ ನೀಡಿದ್ದಾನೆ. ಇವರು 2015ರಲ್ಲಿ ಮದುವೆಯಾಗಿದ್ದು ನಂತರ ದೆಹಲಿಯಲ್ಲಿ ವಾಸವಾಗಿದ್ದರು.
ಗಂಡ ಇಮ್ರಾನ್ ತನಗೆ ಸಣ್ಣ ಸಣ್ಣ ಬಟ್ಟೆ ಹಾಕುವಂತೆ ಒತ್ತಾಯಿಸುತ್ತಾನೆ. ರಾತ್ರಿ ಪಾರ್ಟಿಗೆ ಹೋಗುವಂತೆ, ಮದ್ಯವನ್ನು ಸೇವಿಸುವಂತೆ ಒತ್ತಾಯಿಸುತ್ತಾನೆ ಎಂದು ಮಹಿಳೆ ನೂರ್ ಫಾತಿಮಾ ಆರೋಪಿಸಿದ್ದಾರೆ. ಆದರೆ ನಾನು ಇದಕ್ಕೆ ಒಪ್ಪದೆ ಇದ್ದಾಗ ನನಗೆ ಪ್ರತಿ ದಿನಾ ಹೊಡೆಯುತ್ತಿದ್ದ. ವರ್ಷಗಳಿಂದ ಹಿಂಸೆ ನೀಡುತ್ತಿದ್ದಾನೆ. ಕಳೆದ ಕೆಲವು ದಿನಗಳ ಹಿಂದೆ ಮನೆಬಿಟ್ಟು ಹೋಗು ಎಂದಿದ್ದ. ಅದಕ್ಕೆ ನಾನು ಒಪ್ಪದಿದ್ದಾಗ ತ್ರಿವಳಿ ತಲಾಖ್ ಕೊಟ್ಟಿದ್ದಾನೆ ಎಂದು ಫಾತಿಮಾ ಹೇಳಿದ್ದಾರೆ.
ನೂರ್ ಫಾತಿಮಾ ರಾಜ್ಯ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದು, ಇಮ್ರಾನ್ ಮುಸ್ತಾಫಾನಿಗೆ ನೋಟೀಸ್ ನೀಡಲಾಗಿದೆ.
ಭಾರತದಲ್ಲಿ ತ್ರಿಪಲ್ ತಲಾಖ್ ನೀಡುವುದನ್ನು ನಿಷೇಧಿಸಲಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್