ಮದರಸಾದಲ್ಲಿ ಅಕ್ರಮ ಶಸ್ತ್ರಾಸ್ತ್ರ;ಎಟಿಎಸ್‌ನಿಂದ 6 ಮಂದಿ ಅರೆಸ್ಟ್
Team Udayavani, Jul 11, 2019, 2:39 PM IST
ಬಿಜ್ನೂರ್: ಉತ್ತರಪ್ರದೇಶದ ಎಟಿಎಸ್ ಪೊಲೀಸರು ಮಹತ್ವ ದ ಕಾರ್ಯಾಚರಣೆ ನಡೆಸಿ ಮದರಸಾವೊಂದರಲ್ಲಿ ಶಸ್ತ್ರಾಸ್ತ್ರ ಗಳನ್ನು ಸಂಗ್ರಹಿಸಿಟ್ಟಿದ್ದ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬುಧವಾರ ಮಧ್ಯಾಹ್ನ ಶೆರ್‌ಕೋಟ್ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಎಟಿಎಸ್ ಶಸ್ತ್ರಾಸ್ತ್ರಗಳ ಸಹಿತ 6 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ.
ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಶಂಕೆಯ ಮೇಲೆ ದಾರುಲ್ ಖುರಾನ್ ಹಮೀದಿಯಾ ಮದರಸಾದ ಮೇಲೆ ದಾಳಿ ನಡೆಸಿದ ಎಟಿಎಸ್ 3 ಕಂಟ್ರಿಮೇಡ್ ಪಿಸ್ತೂಲ್‌ಗಳು, 32 ಬೋರ್ ಪಿಸ್ತೂಲ್‌ಗಲು ಮತ್ತು ಅಪಾರ ಪ್ರಮಾಣದ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರ ಪೈಕಿ ಓರ್ವ ಬಿಹಾರ ಮೂಲದವನಾಗಿದ್ದು, ಈತ ಮದರಸಾದಲ್ಲಿ ಶಿಕ್ಷಕ ಎಂದು ತಿಳಿದು ಬಂದಿದೆ.
Bijnor: 6 accused who were detained after illegal weapons were recovered from a ‘madarsa’ in Sherkot, are being interrogated at Anti-Terrorism Squad police station. pic.twitter.com/8uj2dQjWn8
— ANI UP (@ANINewsUP) July 11, 2019